×
Ad

ಭಟ್ಕಳ: ಸಂಸದರಧರ್ಮನಿಂದಕ ಹೇಳಿಕೆಯ ಹಿಂದೆ ಕೋಮುಗಲಭೆ ಸೃಷ್ಟಿಸುವ ಹುನ್ನಾರ-ಶಾಸಕ ವೈದ್ಯಆರೋಪ

Update: 2016-03-07 18:56 IST

ಭಟ್ಕಳ: ಕೆನರಾ ಲೋಕಸಭಾಕ್ಷೇತ್ರದ ಸಂಸದಅನಂತ್‌ಕುಮಾರ್ ಹೆಗಡೆ ಕಳೆದ 20 ವರ್ಷಗಳಿಂದಲೂ ಜನರಲ್ಲಿಕೋಮುಭಾವನೆ ಕೆರಳಿಸಿ ರಾಜಕೀಯ ಮಾಡುತ್ತಬಂದಿದ್ದು ಈಗ ಜಿ.ಪಂ, ತಾ.ಪಂ.ಗಳಲ್ಲಿ ಕಂಡ ಸೋಲನ್ನು ಅರಗಿಸಿಕೊಳ್ಳಲಾಗದೇ ಮತ್ತೊಮ್ಮ ಕೋಮುಗಲಭೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆಎಂದು ಶಾಸಕ ಮಾಂಕಾಳು ಎಸ್. ವೈದ್ಯ ಹೇಳಿದರು. ಅವರು ಸೋಮವಾರಇಲ್ಲಿನ ಬಂದರ್‌ರಸ್ತೆಯಲ್ಲಿರುವ ಹೊಟೇಲ್‌ರಾಯಲ್‌ಓಕ್ ನಲ್ಲಿಇಸ್ಲಾಂಧರ್ಮ ಹಾಗೂ ಮುಸ್ಲಿಮ್ ಸಮುದಾಯವನ್ನು ನಿಂದಿಸಿ ಸಂಸದಅನಂತ್‌ಕುಮಾರ್ ಹೆಗಡೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತ ಮಾತನಾಡುತ್ತಿದ್ದರು.

ಭಟ್ಕಳದಲ್ಲಿ ಹಿಂದೆ ನಡೆದ ಗಲಭೆಗಳಿಂದಾಗಿ ಯಾರಿಗೂ ಲಾಭಆಗಿಲ್ಲ. ಲಾಭಆಗಿದ್ದುಅನಂತ್‌ಕುಮಾರ್ ಹೆಗಡೆಯವರಿಗೆ ಮಾತ್ರ.ಈಗ ಮತ್ತೊಮ್ಮ ಗಲಭೆಯನ್ನು ಸೃಷ್ಟಿಸುವ ಮೂಲಕ ರಾಜಕೀಯ ಲಾಭಗಳಿಸುವ ಹಪಾಹಪಿಯಲ್ಲಿದ್ದಾರೆ.ಇದುಇನ್ನು ಮುಂದೆ ನಡೆಯದು. ಈಗಾಗಲೇ ತಾ.ಪಂ.ಜಿ.ಪಂ ಗಳಲ್ಲಿ ಬಿಜೆಪಿ ಹೀನಾಯ ಸೋಲುಕಂಡಿದೆ. ಮುಂದೆಇದಕ್ಕಿಂತಲೂ ಹೀನಾಯ ಸೋಲು ಕಾಣಲಿಕ್ಕಿದೆಎಂದು ಹೇಳಿದ ಅವರು ಸಂಸದರುಇಲ್ಲಿನಜನರಅಭಿವೃದ್ಧಿಗಾಗಿ ಏನು ಮಾಡಿದ್ದಾರೆ?ಹೋಗಲಿ ಹಿಂದುಗಳಿಗಾದರೂ ಏನು ಮಾಡಿದ್ದಾರೆಎಂದು ಪ್ರಶ್ನಿಸಿ, ಇಲ್ಲಿನ ಮುಸ್ಲಿಮರ ಮನೆಗಳಲ್ಲಿ, ಸೂಪರ್ ಮಾರ್ಕೆಟ್ ನಲ್ಲಿಅಸಂಖ್ಯಾತ ಹಿಂದುಗಳು ಕೆಲಸ ಮಾಡುತ್ತಿದ್ದಾರೆಅವರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?ಅವರಉದ್ಯೋಗಕ್ಕಾಗಿಏನಾದರೂ ಯೋಜನೆಗಳು ತಂದ್ದಿದ್ದೀರಾ?ಎಂದುಅವರುಖಾರವಾಗಿ ಪ್ರಶ್ನಿಸಿದರು.ಈಲ್ಲೆಯಜನರು ಈಗ ಪ್ರಜ್ಞಾವಂತರಾಗಿದ್ದಾರೆ.ನಿಮ್ಮಕೋಮುಭಾವನೆ ಕೆರಳಿಸುವ ಮಾತುಗಳಿಗೆ ಅವರು ಮರುಳಾಗುವುದಿಲ್ಲ ಎಂದರು.

ಬ್ಲಾಕ್‌ಕಾಂಗ್ರೇಸ್‌ಅಧ್ಯಕ್ಷ ವಿಠ್ಠಲ್ ನಾಯ್ಕ ಮಾತನಾಡಿ, ಮುಸ್ಲಿಮರು ಭಯೋತ್ಪಾದಕರೆಂದಾದರೆ ಕಾಶ್ಮೀರದಲ್ಲಿ ಅಫ್ಜಲ್‌ಗುರುವನ್ನು ಬೆಂಬಲಿಸುವ ಪಿಡಿಯೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷದವರಾದಅನಂತ್‌ಕುಮಾರ್‌ಅದಕ್ಕಿಂತಲೂದೊಡ್ಡ ಭಯೋತ್ಪಾಕರಾಗಿದ್ದಾರೆಎಂದರು.ಒಂದುಧರ್ಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸಿ ಧರ್ಮದೊಂದಿಗೆಚೆಲ್ಲಾಟವಾಡುತ್ತಿರುವಅನಂತ್‌ಕುಮಾರ್ ಹೇಳಿಕೆ ಖಂಡನೀಯಎಂದಅವರು ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ ಈ ದೇಶದಅತ್ಯಂತ ಭಯೋತ್ಪಾದಕ ಪಕ್ಷವಾಗಿದೆ.ಭಯೋತ್ಪಾದನೆಯ ಸೃಷ್ಟಿಕರ್ತರುಜನಪ್ರತಿನಿಧಿ ಆಗಲೂ ಯೋಗ್ಯರಲ್ಲಎಂದು ಸಂಸದರನ್ನುಅವರು ಟೀಕಿಸಿದರು.
ಹಿರಿಯಕಾಂಗ್ರೇಸ್ ಮುಖಂಡರಾಮಾ ಮೊಗೇರ್ ಮಾತನಾಡಿಅನಂತ್‌ಕುಮಾರ್ ಹೇಳಿಕೆಯಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ. ಇಲ್ಲಿ ಎಲ್ಲಾ ಧರ್ಮದವರು ಅನೋನ್ಯವಾಗಿ ಬಾಳುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ನಾವು ಯಾವುದೇ ಗಲಭೆ ಗೊಂದಲಗಳಿಲ್ಲದೆ ಶಾಂತಿಯುತಜೀವನ ಸಾಗಿಸುತ್ತಿದ್ದೇವೆ. ಶಾಂತಿಕದಡುವಅನಂತ್‌ಕುಮಾರ್ ಹೇಳಿಕೆಯನ್ನು ನಾವು ಒಕ್ಕೋರಲಿನಿಂದಖಂಡಿಸುತ್ತೇವೆಎಂದರು.

 ಈ ಸಂದರ್ಭದಲ್ಲಿ ನೂತನವಾಗಿಆಯ್ಕೆಗೊಂಡಿರುವಜಿ.ಪಂ. ಅಲ್ಬರ್ಟಡಿಸೋಸ್ಟಾ, ಜಯಶ್ರೀ ಮೊಗೇರ್ ಹಾಗೂ ತಾ.ಪಂ ಸದಸ್ಯರಾದ ಸಿಂಧೂ ಭಾಸ್ಕರ್‌ರಾಧ್ಯ ವೈದ್ಯ, ವಹಾಬಲೇಶ್ವರ ನಾಯ್ಕ ಸೇರಿದಂತೆ ಮಾಜಿ ಜಿ.ಪಂ.ಸದಸ್ಯಅಬ್ದುಲ್‌ರಹೀಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News