ಮಹಾಕಾಳಿಪಡ್ಪು ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಕೆ
ಮಂಗಳೂರು,ಮಾ.7: ಮಹಾಕಾಳಿಪಡ್ಪು ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಮಾಡುವಂತೆ ನಿರ್ಮಲ ನಗರ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸದರ್ನ್ ರೈಲ್ವೆ ಮಂಗಳೂರು ವಿಭಾಗದ ಸಹಾಯಕ ಮಂಡಲ ಇಂಜಿನಿಯರ್ ಎಂ. ಎಹಿಲನ್‌ರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕೇಂದ್ರ ಸರಕಾರದ ರೈಲ್ವೆ ಬಜೆಟ್‌ನಲ್ಲಿ ನೇತ್ರಾವತಿಯಿಂದ ಮಂಗಳೂರು ಸೆಂಟ್ರಲ್ ಗೆ ರೈಲ್ವೆ ಹಳಿಯನ್ನು ದ್ವಿಪಥಗೊಳಿಸಲು 18.93 ಕೋಟಿ ರೂ. ಮೀಸಲಿಟ್ಟಿದ್ದು ಈ ಅನುದಾನದಲ್ಲಿ ಮಹಾಕಾಳಿಪಡ್ಪು ಅಂಡರ್‌ಪಾಸ್ ನಿರ್ಮಾಣವನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಮಹಾಕಾಳಿಪಡ್ಪು ರೈಲ್ವೆ ಗೇಟ್ ಬಳಿ ಡ್ರೆನೇಜ್ ನೀರು ಹರಿದಾಡಲು ನಿರ್ಮಿಸಿರುವ ಕೆಳಸೇತುವೆಯನ್ನು ಅಗಲಗೊಳಿಸಿ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಮತ್ತಿತ್ತರ ವಾಹನಗಳು ಓಡಾಟ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ನಿರ್ಮಲ ನಗರ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಮೊಹಮ್ಮದ್,ಪ್ರ.ಕಾರ್ಯದರ್ಶಿ ಇಮ್ತಿಯಾಜ್, ಕೋಶಾಧಿಕಾರಿ ಶರೀಫ್ ಟಿ.ಎ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮೋಲ ರಾವ್, ಎಲಿಝಬೆತ್, ಅಬ್ದುಲ್ ಸಮದ್ ಉಪಸ್ಥಿತರಿದ್ದರು.