ಶಾಂತಿ ಸಾಮರಸ್ಯವನ್ನು ಕದಡುವ ಸಂಸದ ಅನಂತ ಕುಮಾರ್ ಹೆಗಡೆ ಯನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು - ಕೋಡಿಜಾಲ್ ಇಬ್ರಾಹಿಂ
ಮಂಗಳೂರು,ಮಾ.7: ಶಾಂತಿ ಸಾಮರಸ್ಯವನ್ನು ಕದಡುವ ಸಂಸದ ಅನಂತ ಕುಮಾರ್ ಹೆಗಡೆ ಯನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು ಮತ್ತು ಅವರ ವಿರುದ್ದ ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಹೇಳಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ನೀಡಿದ ಹೇಳಿಕೆಯು ಸರ್ವಧರ್ಮ ವಿರೋಧಿಯಾಗಿದೆ. ಯಾವುದೇ ಧರ್ಮ ಇನ್ನೊಂದು ಧರ್ಮವನ್ನು ನಾಶವಾಗಲು ಬಯಸುವುದಿಲ್ಲವಾದ ಕಾರಣ ಸಂಸದರ ಹೇಳಿಕೆ ಖಂಡನೀಯ ಎಂದರು.
ಇಸ್ಲಾಂ ಧರ್ಮ ಎಂದಿಗೂ ಉಗ್ರವಾದವನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದಾಗಿ ಧಾರ್ಮಿಕ ನೇತಾರರಾದಿಯಾಗಿ ಎಲ್ಲರೂ ಹೇಳಿದರೂ, ಮತ್ತೆ ಮತ್ತೆ ಅದೇ ಮಾತನ್ನು ಹೇಳುತ್ತಿರುವುದು ಆಕ್ಷೇಪಾರ್ಹ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾರ್ಪೊರೇಟರ್ ಎ.ಸಿ.ವಿನಯರಾಜ್, ಕಾಂಗ್ರೆಸ್ ಮುಖಂಡರಾದ ಕೆ.ಎಸ್.ಮೊಹಮ್ಮದ್ ಮಸೂದ್, ಸದಾಶಿವ ಉಳ್ಳಾಲ್, ನಜೀರ್ ಬಜಾಲ್, ಮೊಹಮ್ಮದ್ ಶರ್ೀ ಉಪಸ್ಥಿತರಿದ್ದರು.