×
Ad

ಫ್ಲೋರಿಡಾದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಲಿರುವ BIT ಪ್ರೊಫೆಸರ್ ಮುಸ್ತಫಾ ಬಸ್ತಿಕೋಡಿ

Update: 2016-03-07 19:29 IST

ಮಂಗಳೂರು, ಮಾ. 7: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ಮುಸ್ತಫಾ ಬಸ್ತಿಕೋಡಿ ಯುಎಸ್‌ಎಗೆ ಭೇಟಿ ನೀಡುತ್ತಿದ್ದಾರೆ. ಅವರು ಯುಎಸ್‌ಎಯ ಫ್ಲೊರಿಡಾದಲ್ಲಿ ‘ಕಾಂಪ್ಲೆಕ್ಸಿಟಿ, ಇನ್‌ಫೋರ್ಮಾಟಿಕ್ಸ್ ಮತ್ತು ಸೈಬರ್‌ನೆಟಿಕ್ಸ್ (ಐಎಂಸಿಐಸಿ- 2016) ವಿಷಯದಲ್ಲಿ ನಡೆಯಲಿರುವ 7ನೆ ಅಂತಾರಾಷ್ಟ್ರೀಯ ಮಲ್ಟಿ ಕಾನ್ಫರೆನ್ಸ್‌ನಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ. ಯುಎಎಸ್‌ಎಯ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫೋಮ್ಯಾಟಿಕ್ಸ್ ಆ್ಯಂಡ್ ಸಿಸ್ಟೆಮಿಕ್ಸ್ (ಐಐಐಎಸ್) ಸಮ್ಮೇಳನವನ್ನು ಆಯೋಜಿಸಿದೆ. ತನ್ನ ಪಿಎಚ್‌ಡಿಯನ್ನು ಪೂರ್ಣಗೊಳಿಸುವ ಹಂತದಲ್ಲಿರುವ ಪ್ರೊ. ಮುಸ್ತಫಾ, ಉದ್ಯಮ 15 ವರ್ಷಗಳ ಶೈಕ್ಷಣಿಕ, ಸಂಶೋಧನಾ ಮತ್ತು ಉದ್ಯಮ ಅನುಭವ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News