×
Ad

ಕೊಣಾಜೆ: ಅಸೈಗೋಳಿ ಅಭಯಾಶ್ರಯದಲ್ಲಿ ಕಥಾ ಕೀರ್ತನ ಕಾರ್ಯಕ್ರಮ

Update: 2016-03-07 19:46 IST

ಅಸೈಗೋಳಿ ಅಭಯಾಶ್ರಯದಲ್ಲಿ ಭಾನುವಾರ ನಡೆದ ಕಥಾ ಕೀರ್ತನ ಕಾರ್ಯಕ್ರಮವನ್ನು ರವೀಂದ್ರ ಶೆಟ್ಟಿ ಉಳಿದೊಟ್ಟು ಉದ್ಘಾಟಿಸಿದರು.
ಕೊಣಾಜೆ: ಪೌರಾಣಿಕ ಕಥಾ ಕೀರ್ತನದಂತಹ ಕಾರ್ಯಕ್ರಮವು ಸಾಂಸ್ಕೃತಿಕ ಮನರಂಜನೆಯೊಂದಿಗೆ ನಮ್ಮ ಬದುಕಿಗೆ ಸ್ಪೂರ್ತಿಯನ್ನು ಕೊಡುತ್ತದೆ. ಅಲ್ಲದೆ ನಮ್ಮಲ್ಲಿ ದೇಶೀ ಸಂಸ್ಕೃತಿ, ಪುರಾಣ ಜ್ಞಾನವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಪುಣ್ಯದ ನೆಲವಾದ ಅಭಯ ಆಶ್ರಯದಂತಹ ಪ್ರದೇಶದಲ್ಲಿ ಕಥಾ ಕೀರ್ತನದಂತಹ ಕಾರ್ಯಕ್ರಮವು ನಡೆಯುವುದು ಔಚಿತ್ಯಪೂರ್ಣವಾದುದು ಎಂದು ದೇರಳಕಟ್ಟೆ ರತ್ನ ಎಜ್ಯುಕೇಶನ್ ಟ್ರಸ್ಟ್‌ನ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಅಭಿಪ್ರಾಯ ಪಟ್ಟರು.
  
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಅಸೈಗೋಳಿಯ ಅಭಯ ಆಶ್ರಯದಲ್ಲಿ ಸೋಮವಾರ ಸಂಜೆ ತೋನ್ಸೆ ಪುಷ್ಕಲ್ ಕುಮಾರ್ ಸಂಗಡಿಗರಿಂದ ನಡೆದ ‘ಪಾರ್ವತಿ ಪರಿಣಯ’ ಪೌರಾಣಿಕ ಕಥಾ ಕೀರ್ತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ ಅವರು , ಕಥಾ ಕೀರ್ತನ ಕಾರ್ಯಕ್ರಮಗಳಿಂದ ಬಹಳಷ್ಟು ವಿಚಾರಧಾರೆಯನ್ನು ನಾವು ತಿಳಿದುಕೊಂಡು ನಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ ಮಾತ್ರವಲ್ಲದೆ ಸರಕಾರದ ವತಿಯಿಂದ ಅಭಯ ಆಶ್ರಯ, ಕಾರಾಗೃಹದಂತಹ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಧನಲಕ್ಷ್ಮೀ, ದೈಹಿಕ ಶಿಕ್ಷಕರಾದ ತ್ಯಾಗಂ ಹರೇಕಳ, ಲಕ್ಷ್ನೀ ನಾರಾಯಣ ರೈ ಹರೇಕಳ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News