ಕಡಬ : ಶೈಕ್ಷಣಿಕ ಗ್ರಾಮೀಣ ಅಧ್ಯಯನ ಶಿಬಿರ
ಕಡಬ , ಮಾ.7. ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ವತಿಯಿಂದ ಜಿ.ಪಂ ಮಂಗಳೂರು, ಮರ್ದಾಳ ಗ್ರಾಮ ಪಂಚಾಯತು ಹಾಗೂ ಸ್ಥಳಿಯ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶೈಕ್ಷಣಿಕ ಗ್ರಾಮೀಣ ಅಧ್ಯಯನ ಶಿಬಿರವು ಬಂಟ್ರ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.08 ರಿಂದ ಮಾ.14 ರವರೆಗೆ ನಡೆಯಲಿದೆ. ಮಾ.8 ರಂದು ಸಾಯಂಕಾಲ ಸುಳ್ಯ ಶಾಸಕ ಎಸ್. ಅಂಗಾರ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮರ್ದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಅಕ್ಷಯ್ ಕೆ.ಸಿ., ದ.ಕ ಜಿಲ್ಲಾ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಕೈಕುರೆ, ಜಿಲ್ಲಾ ನೆರವು ಘಟಕದ ಸಂಯೋಜಕಿ ಮಂಜುಳಾ ಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಪುತ್ತೂರು ವಲಯ ಮೇಲ್ವಿಚಾರಕ ದರ್ಣಪ್ಪ ಮೂಲ್ಯ, ಪುತ್ತೂರು ಭೂ ಅಭಿವೃದ್ದಿ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಮನೋಹರ್ರ ರೈ, ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಮರ್ದಾಳ ಜೀವನ್ ಜ್ಯೋತಿ ವಿಶೇಷ ಶಾಲಾ ನಿರ್ದೇಶಕ ರೆ.ಫಾ ಆಂಟನಿ ನೆರಿಞಪಳ್ಳಿ, ಬಂಟ್ರ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸತೀಶ್ ಟಿ, ಸುಳ್ಯ ಎನ್ನೆಂಸಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಮೀನಾಕುಮಾರಿ, ಕಡಬ ಸಹಕಾರಿ ಸಂಘದ ಉಪಾಧ್ಯಕ್ಷ ರಮೇಶ್ ಕಲ್ಪುರೆ, ಮರ್ದಾಳ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೆಂಕಟ್ರಮಣ ಗೌಡ, ಮರ್ದಾಳ ಗ್ರಾ.ಪಂ ಮಾಜಿ ಅಧ್ಯಕ್ಷ ಜನಾರ್ದನ ಗೌಡ, ಅಂತರಾಷ್ಟ್ರೀಯ ಕ್ರೀಡಾಪಟು ರೆಬೆಕಾ, ಎಡಮಂಗಳ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಮರ್ದಾಳ ಸಾಮಾಜಿಕ ಸೇವಕಿ ಶಾರದಾ ಜಯಕುಮಾರ್ ಅತಿಥಿಗಳಾಗಿರುವರು. ಮಾ.9 ರಿಂದ ಮಾ.14 ತನಕ ನಡೆಯಲಿರುವ ಶಿಬಿರದಲ್ಲಿ ಸ್ವಉದ್ಯೋಗ, ಜೀವನ ಕೌಶಲ್ಯ, ಕೃಷಿ ವಿಧಾನ, ಸರಕಾರದ ವಿವಿಧ ಯೋಜನೆ, ವೈದ್ಯಕೀಯ ಉಚಿತ ಶಿಬಿರ, ಸ್ಟಾರ್ಟ್‌ಅಪ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ, ಶಿಕ್ಷಣ ಮೊದಲು-ಮದುವೆ ನಂತರ, ಕೌಟಂಬಿಕ ದೌರ್ಜನ್ಯ ಮತ್ತು ಪೋಕ್ಸೋ ಕಾಯಿದೆ ಮೊದಲಾದ ವಿಚಾರದಲ್ಲಿ ದಿನಂಪ್ರತಿ ಬೆಳಿಗ್ಗೆ ಹಾಗೂ ಸಾಯಂಕಾಲ ಮಾಹಿತಿ, ತರಬೇತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.14 ರಂದು ನಡೆಯಲಿರುವ ಸಮರೋಪ ಸಮಾರಂಭದಲ್ಲಿ ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ ಮುಖ್ಯಶಿಕ್ಷಕ ಈಶೋ ಫಿಲಿಫ್ ಸಮಾರೋಪ ಭಾಷಣ ಮಾಡಲಿದ್ದಾರೆ. ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಿರಿಧರ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ ವರ್ಗಿಸ್, ತಾಲೂಕು ಪಂಚಾಯಿತಿ ಸದಸ್ಯೆ ಪಿ.ವೈ. ಕುಸುಮ, ಮರ್ದಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ ಕೆ.ಎಸ್., ಪುತ್ತೂರು ತಾಲೂಕು ಬಂಟ್ರ ಸರಕಾರಿ ಉ.ಹಿ.ಪ್ರಾ.ಶಾಲಾ ಮುಖ್ಯಗುರು ದೇವಕಿ, ಮರ್ದಾಳ ಗ್ರಾ.ಪಂ ಲೆಕ್ಕಾಧಿಕಾರಿ ಭುವನೇಂದ್ರ ಕುಮಾರ್, ಮರ್ದಾಳ ಅಂಗನವಾಡಿ ಕಾರ್ಯಕರ್ತೆ ದಮಯಂತಿ, ಎನ್‌ಎಂಸಿ ಸಮಾಜಕಾರ್ಯ ವಿಭಾಗದ ದಿನೇಶ್, ದ.ಕ ಜಿಲ್ಲಾ ನೆರವು ಘಟಕದ ರೋಹಿತ್ ಎ.ಆರ್. ಅತಿಥಿಗಳಾಗಿರುವರು ಎಂದು ಪ್ರಕಟಣೆ ತಿಳಿಸಿದೆ.