×
Ad

ಮಾ.13: ವಲಯ ಮಟ್ಟದ ಶಿಲುಬೆಯ ಹಾದಿ ಕಾರ್ಯಕ್ರಮ

Update: 2016-03-07 23:33 IST

ಉಡುಪಿ, ಮಾ.7: ವಲಯ ಮಟ್ಟದ ವಾರ್ಷಿಕ ಶಿಲುಬೆಯ ಹಾದಿ ಕಾರ್ಯಕ್ರಮವನ್ನು ಮಾ.13ರಂದು ಅಪರಾಹ್ನ ಮೂರು ಗಂಟೆಗೆ ಮೂಡುಬೆಳ್ಳೆ ಸಮೀಪದ ಕುಂತಲನಗರ ಸಂತ ಅಂತೋನಿಯವರ ಚರ್ಚ್‌ನಲ್ಲಿ ಆಯೋಜಿಸಲಾಗಿದೆ.

ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಿದ್ದು, ಬಲಿಪೂಜೆಯ ಬಳಿಕ ಶಿಲುಬೆಯ ಹಾದಿ ನಡೆಯಲಿದೆ. ಮೂಡುಬೆಳ್ಳೆ ಆಸಿಸಿ ನಿಲಯದ ಪ್ರಕಾಶ್ ಲೋಬೊ ಶಿಲುಬೆಯ ಹಾದಿ ಹಾಗೂ ಪ್ರವಚನವನ್ನು ನಡೆಸಿಕೊಡಲಿದ್ದಾರೆ. ಅಪರಾಹ್ನ 3 ಗಂಟೆಯಿಂದ ಪಾಪ ನಿವೇದನೆಗೆ ಅವಕಾಶವಿದ್ದು, ಅತಿಥಿ ಯಾಜಕರು ಪಾಪ ನಿವೇದನೆಗೆ ಸಹಕರಿಸಲಿದ್ದಾರೆ ಎಂದು ಉಡುಪಿ ವಲಯ ಪ್ರಧಾನ ಧರ್ಮಗುರು ಫ್ರೆಡ್ ಮಸ್ಕರೇನ್ಹಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News