×
Ad

ಮಂಜೇಶ್ವರ : ಯುವಕನನ್ನು ಹತ್ಯೆ ಮಾಡಿ ಪೊದೆಗೆಸೆದ ಫೋನ್ ಸಂದೇಶ ಅಸ್ವಸ್ಥ ಯುವಕನ ಪತ್ತೆ

Update: 2016-03-07 23:59 IST


    
 ಮಂಜೇಶ್ವರ : ಯುವಕನನ್ನು ಹೊಡೆದು ಕೊಂದು ಪೊದೆಗಳೆಡೆ ಉಪೇಕ್ಷಿಸಲಾಗಿದೆ ಎಂದು ಪೊಲೀಸರಿಗೆ ಲಭಿಸಿದ ಫೋನ್ ಸಂದೇಶದಂತೆ ಹುಡುಕಾಡಿದಾಗ ಅಸ್ವಸ್ಥ ಸ್ಥಿತಿಯಲ್ಲಿ ಯುವಕನೋರ್ವನನ್ನು ಪತ್ತೆಹಚ್ಚಲಾಗಿದೆ. ಈತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.  ಚೂರಿತ್ತಡ್ಕ ನಿವಾಸಿ ಸಕರಿಯಾ (35)ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೊಡ್ಯುಮ್ಮೆ ಕಂಚಿಕಟ್ಟೆಯಲ್ಲಿರುವ ಪೊದೆಯಲ್ಲಿ ಎಸೆದಿರುವುದಾಗಿ ಫೋನ್ ಸಂದೇಶ ಬಂದಿತ್ತು. ಯುವಕನಿಗೆ ಹಲ್ಲೆ ಮಾಡಿದ ಸ್ಥಿತಿಯಲ್ಲಿ ಗಾಯಗಳಾಗಿವೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News