×
Ad

ಸುಳ್ಯ: ಹೋಲೋಗ್ರಾಂ ಇಲ್ಲದ ಆರ್‌ಟಿಸಿ ವಿತರಣೆ, ನಾಗರಿಕರಿಂದ ಆಕ್ಷೇಪ - ಅಧಿಕಾರಿಗಳಿಗೆ ತರಾಟೆ

Update: 2016-03-08 17:06 IST

ಸುಳ್ಯ: ಸುಳ್ಯ ತಾಲೂಕು ಕಚೇರಿಯಲ್ಲಿ ವಿತರಿಸುವ ಆರ್‌ಟಿಸಿಗೆ ಹಾಲೋಗ್ರಾಂ ಹಾಕದೇ ಇರುವ ಕುರಿತು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಆರ್‌ಟಿಸಿ ನೀಡುವಾಗ ರಾಜ್ಯ ಸರ್ಕಾರದ ಅಧಿಕೃತ ಹೋಲೋಗ್ರಾಂ ಇರುವ ಸ್ಟಿಕ್ಕರ್ ಹಾಕಿ ಗುಮಾಸ್ತ ಸಹಿ ಮಾಡಬೇಕಿದ್ದು, ಸ್ಟಿಕ್ಕರ್ ಮುಗಿದಿದ್ದು, ಬಳಿಕ ಆರ್‌ಟಿಸಿಯನ್ನು ಹಾಗೆಯೇ ಸ್ಟಿಕ್ಕರ್ ಇಲ್ಲದೆ ವಿತರಿಸಲಾಗುತ್ತಿತ್ತು. ಇದರಿಂದ ಆಕ್ರೋಶಗೊಂಡ ನಾಗರಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೋಲೋಗ್ರಾಂ ಇಲ್ಲದ ಆರ್‌ಟಿಸಿ ಅಧಿಕೃತ ಅಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡರೂ ಸ್ಟಿಕ್ಕರ್ ಇಲ್ಲದೆ ವಿತರಿಸುವುದನ್ನು ನಿಲ್ಲಿಸಿರಲಿಲ್ಲ. ಪಂಜ ನಾಡಕಚೇರಿಯಿಂದ ತಂದು ಬಳಿಕ ಸ್ಟಿಕ್ಕರ್‌ಗಳನ್ನು ನೀಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಹೋಲೋಗ್ರಾಂ ಮುಗಿದಿರುವ ಬಗ್ಗೆ ತನ್ನ ಗಮನಕ್ಕೆ ಸಿಬ್ಬಂದಿ ಯಾವುದೇ ಮಾಹಿತಿ ನೀಡಿಲ್ಲ. ಸೋಮವಾರ ತಾನು ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದೆ. ಆಗ ಫೋನ್ ಮಾಡಿ ಹೇಳಿದ್ದರೂ ಅಲ್ಲಿಂದ ತರುತ್ತಿದ್ದೆ ಎನ್ನುತ್ತಾರೆ ಉಪತಹಶೀಲ್ದಾರ್ ರಾಮಣ್ಣ ನಾಯ್ಕಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News