×
Ad

ದೇಶಕ್ಕಾಗಿ ನೀಡಿದ ಸುಧೀರ್ಘ ಸೇವೆಗಾಗಿ ಬ್ರಿಗೇಡಿಯರ್‌ಗೆ ಸನ್ಮಾನ

Update: 2016-03-08 17:16 IST

 ಮಂಗಳೂರು., ಮಾರ್ಚ್, 08; ಅಡ್ಯಾರ್‌ನಲ್ಲಿರುವ ದಿ ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ಇದರ ವಾರ್ಷಿಕೋತ್ಸವವನ್ನು ಇತ್ತೀಚೆಗೆ ನಡೆಯಿತು. ಬ್ರಿಗೇಡಿಯರ್ ಐ.ಎನ್.ರೈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು, ಇವರು ದೇಶಕ್ಕಾಗಿ ನೀಡಿದ ಸುಧೀರ್ಘ ಸೇವೆಗಾಗಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
       ಕನಸು ವಿಷಯಕ್ಕೆ ಆಧರಿಸಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ವಿಭಾಗದ ಮಕ್ಕಳ ಕಾರ್ಯಕ್ರಮ ಹಾಗೂ ಸುಧನ್ವ ರವರಿಂದ ಜಾದೂ ಪ್ರದರ್ಶನ ನಡೆಯಿತು. ಪ್ರಾಂಶುಪಾಲ ಡಾ. ಕುಸುಮ್ ಸ್ವಾಗತಿಸಿದರು. ಕೇಂಬ್ರಿಡ್ಜ್ ಸಮೂಹ ಸಂಸ್ಥೆಗಳ ಉಪಸಭಾಪತಿ ಸಾಹಿಲ್ ಅಹಮದ್ ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News