×
Ad

ಭಟ್ಕಳ: ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಸಾಧನೆಗೈಯ್ಯುವ ಸಾಮಾರ್ಥ್ಯ ಮಹಿಳೆಗಿದೆ-ಡಾ.ದಿಪೀಕಾ

Update: 2016-03-08 18:54 IST

ಭಟ್ಕಳ: ಸಮಾಜದಎಲ್ಲ ಕ್ಷೇತ್ರಗಳಲ್ಲೋ ಮಹಿಳೆ ಅಗಾಧ ಸಾಧನೆ ಮಾಡುತ್ತಿದ್ದಾಳೆ ಎಂದುಮುರ್ಡೇಶ್ವರದಆರ್.ಎನ್.ಎಸ್. ಆಸ್ಪತ್ರೆಯ ಮನೋರೋಗತಜ್ಞೆಡಾ. ದೀಪಿಕಾ ಚೇತನಕಲ್ಕೂರು ಹೇಳಿದರು.
   
ಅವರುವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕೆ.ಡಿ.ಸಿ.ಸಿ. ಕಾರವಾರ, ಅರ್ಪಣಾತೆರ್ನಮಕ್ಕಿ, ಸ್ಪೂರ್ತಿಕರಿಕಲ್, ನವೋದಯ ಸಣಭಾವಿ, ಆದರ್ಶ ಮುರ್ಡೇಶ್ವರ ಮಹಾ ಸಂಘಗಳು ಹಾಗು ಸ್ವ-ಸಹಾಯ ಸಂಘಗಳ ಸಂಯುಕ್ತಆಶ್ರಯದಲ್ಲಿ ಶಿರಾಲಿಯ ಸಾರದಹೊಳೆಯ ನಾಮಧಾರಿ ಸಭಾಭವನದಲ್ಲಿಎರ್ಪಡಿಸಲಾದಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನುಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆ ಅದೆಷ್ಟೆಕಷ್ಟದ ಕೆಲಸವಾದರೂಕೂಡಅವರಆತ್ಮಸ್ಥೈರ್ಯದೊಂದಿಗೆ ಮಾಡುತ್ತಾಳೆ ಇದನ್ನು ನಾವೆಲ್ಲ ಪ್ರಶಂಸಿಸಲೆಬೇಕು.ಹಾಗೂ ಯಾವುದೇ ಸಾಧನೆ ಮಾಡುವದಕ್ಕೆ ಮುಖ್ಯವಾಗಿ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯದಅವಶ್ಯಕತೆಇರುತ್ತದೆ.ಅದು ಹುಟ್ಟಿನಿಂದಲೇ ಹೆಣ್ಣಿಗೆ ಬರುತ್ತದೆಎಂದರು.ಈಗಿನ ಸಮಾಜದಲ್ಲಿ ಹೆಣ್ಣುಎಲ್ಲಾಕ್ಷೇತ್ರದಲ್ಲಿಯೂ ಹಾಸುಹೊಕ್ಕಾಗಿದ್ದು, ಐಟಿಯಿಂದ ಹಿಡಿದುಒಂದು ಮನೆಯ ಸಂಸಾರವನ್ನು ಸರಿದುಗಿಸುವ ಕೆಲಸದಲ್ಲಿ ಮೊದಲಿಗಳಾಗಿ ದ್ದಾಳೆಂದರೆಅದು ಹೆಣ್ಣು ಮಾತ್ರಎಂದರು.

ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್‌ನಉಪನ್ಯಾಸಕಿ ಪೂರ್ಣಿಮಾ ಹೆಬ್ಬಾರ ಶತಶತಮಾನದಿಂದಲೂ ಪುರುಷ ಸಮಾಜದಲ್ಲಿ ಪುರುಷರು ಮೇಲುಸ್ಥರದಲ್ಲಿದ್ದಾರೆ.ಆದರೆ ಈಗಿನ ಸಮಾಜದಲ್ಲಿ ಬದಲಾವಣೆಯಾಗಿದ್ದು, ಗಂಡಿನ ಸರಿಸಮಾನವಾಗಿ ಹೆಣ್ಣು ಕೆಲಸಕಾರ್ಯಮಾಡುವಂತಹದ್ದನ್ನ ನಾವೆಲ್ಲಾ ನೋಡಬಹುದಾಗಿದೆ.ಈ ಸಮಯದಲ್ಲಿಗಾಂಧೀಜಿಯ ಕನಸು ನೆನಪಾಗುತ್ತದೆ.ಅದುವೇರಾತ್ರಿ ಸಮಯದಲ್ಲಿಒಂದು ಹೆಣ್ಣುಯಾವ ಭಯವಿಲ್ಲದೇಧೈರ್ಯದಿಂದ ನಡೆದುಕೊಂಡು ಹೋಗುತ್ತಾಳೋ ಅವತ್ತುದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಂತೆ ಎಂದರು.
 
  ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಹಾಗೂ ಪುರುಷರಿಗೆ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕಾ ಹಾಗೂ ಜಿಲ್ಲಾ ಪಂಚಾಯತ್‌ಚುನಾವಣೆಯಲ್ಲಿ ಗೆಲುವು ಸಾಧಿಸಿದವರನ್ನು ಕೂಡಾ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಅಧ್ಯಕ್ಷತೆಯನ್ನು ಶಿರಾಲಿ ಗ್ರಾಮ ಪಂಚಾಯತ್‌ಅಧ್ಯಕ್ಷ ವೆಂಕಟೇಶ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಜಯಶ್ರೀ ಮೊಗೇರ, ತಾ.ಪಂ.ಸದಸ್ಯ ಮಹಾಬಲೇಶ್ವರ ನಾಯ್ಕ, ಜಯಲಕ್ಷ್ಮೀಗೊಂಡ, ಮುರ್ಡೇಶ್ವರದಆರ್.ಎನ್.ಎಸ್. ಶಿಕ್ಷಣ ಸಂಸ್ಥೆಗಳ ನಿರ್ದೇಶಕಎಮ್.ವಿ.ಹೆಗಡೆ, ಸಮುದಾಯಅಭಿವೃದ್ಧಿಯೋಜನೆ ಮುರ್ಡೇಶ್ವರದಯೋಜನಾಧಿಕಾರಿ ಕೆ.ಮರಿಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾರದಹೊಳೆಯ ಮುಖ್ಯಾಧ್ಯಾಪಕಿ ಶ್ಯಾಮಲಾ ವೈದ್ಯ, ಕೆ.ಡಿ.ಸಿ.ಸಿ. ಕಾರವಾರದ ಸಂಯೋಜಕ ಮಾರುತಿ ನಾಯ್ಕ, ಕೃಷಿ ಅಧಿಕಾರಿಜಿ.ಎನ್. ನಾಯ್ಕ, ಹಿರಿಯಆರೋಗ್ಯ ಸಹಾಯಕಈರಯ್ಯದೇವಡಿಗ, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News