×
Ad

ಕಾಸರಗೋಡು: ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಪೈವಳಿಕೆ ಸೆಕ್ಷನ್ ವ್ಯಾಪ್ತಿಯಲ್ಲಿ ನಾಳೆ ವಿದ್ಯುತ್ ಮೊಟಕು

Update: 2016-03-08 19:23 IST


ಕಾಸರಗೋಡು  : ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ  ಪೈವಳಿಕೆ  ಸೆಕ್ಷನ್ ನ   ಲಾಲ್ ಬಾಗ್ , ಚಿಪ್ಪಾರ್,  ಕೊಮ್ಮಂಗಳ , ಕುರುಡಪದವು  ವ್ಯಾಪ್ತಿಯಲ್ಲಿ ನಾಳೆ ( ಮಾ. ೧೦)  ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆ ತನಕ ವಿದ್ಯುತ್ ಮೊಟಕು ಗೊಳ್ಳಲಿದೆ  ಎಂದು ಅಸಿಸ್ಟೆಂಟ್  ಇಂಜಿನೀಯರ್   ತಿಳಿಸಿದ್ದಾರೆ. 

ಕಾಸರಗೋಡು  :  ಕನ್ನಡ ಭಾಷಾ ಅಲ್ಪಸಂಖ್ಯಾತ ರ  ಸಮಸ್ಯೆ ಮತ್ತು ಆತಂಕವನ್ನು  ಪರಿಹರಿಸಲು  ತುರ್ತು ಕ್ರಮ  ತೆಗೆದುಕೊಳ್ಳಬೇಕು ಎಂದು  ಸಿಪಿಎಂ ನೇತ್ರತ್ವದ ಎಡರಂಗ  ಮಂಜೇಶ್ವರ  ವಲಯ  ಅಭಿವ್ರದ್ದಿ ಕಾರ್ಯಾಗಾರ ಒತ್ತಾಯಿಸಿದೆ.
ತುಳು ಭಾಷೆ ಯನ್ನು   ಎಂಟನೇ   ಪರಿಚ್ಚೇಧದಲ್ಲಿ  ಸೇರ್ಪಡೆಗೊಳಿಸಬೇಕು,  ಉರ್ದು ಅಕಾಡಮಿ ಯನ್ನು  ಶೀಘ್ರ ಅನುಷ್ಠಾನಗೊಳಿಸಬೇಕು  ಎಂದು  ಒತ್ತಾಯಿಸಿತು.
ಉಪ್ಪಳ ಕೈಕಂಬದಲ್ಲಿ  ನಡೆದ ಅಭಿವ್ರದ್ದಿ   ಕಾರ್ಯಾಗಾರವನ್ನು  ಶಾಸಕ ಇ. ಚಂದ್ರಶೇಖರನ್  ಉದ್ಘಾಟಿಸಿದರು.
ಜೆ ಡಿ ಎಸ್  ಮುಖಂಡ   ಎಸ್. ಎಂ . ಎ  ತಂಗಲ್  ಅಧ್ಯಕ್ಷತೆ  ವಹಿಸಿದ್ದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ   ಕೆ. ಪಿ ಸತೀಶ್ಚಂದ್ರನ್,  ಮಾಜಿ ಶಾಸಕ ಸಿ. ಎಚ್   ಕುನ್ಚ೦ಬು, ಪಿ. ಜನಾರ್ದನ್,  ಎ . ಅಬೂಬಕ್ಕರ್   , ಕೆ ಽಅರ್ ಜಯಾನಂದ , ಬಿ . ವಿ . ರಾಜನ್ , ವಿ . ಪಿ . ಪಿ  ಮುಸ್ತಫಾ  ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News