×
Ad

ಎಡಪದವು: ಟಿಪ್ಪರ್-ಈಚರ್ ಢಿಕ್ಕಿ, ಮೂವರು ಮೃತ್ಯು; ಓರ್ವ ಗಂಭೀರ

Update: 2016-03-08 19:42 IST

ಮಂಗಳೂರು, ಮಾ. 8: ಟಿಪ್ಪರ್‌ವೊಂದು ರಸ್ತೆ ಬಂದಿ ನಿಂತಿದ್ದ ಈಚರ್ ವಾಹನವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳಗ್ಗೆ ಎಡಪದವು ಜಂಕ್ಷನ್ ಬಳಿ ಸಂಭವಿಸಿದೆ.
ಮೃತರನ್ನು ಹಾವೇರಿಯ ನಿವಾಸಿ ಕಲವೀರಪ್ಪ ಗುಡಗೇರಿ(38), ಉತ್ತರ ಪ್ರದೇಶದ ಸೋನು (35) ಹಾಗೂ ಮಂಗಳೂರಿನ ಡೊಂಗರಕೇರಿ ನಿವಾಸಿ ಪ್ರಕಾಶ್ ರಾವ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಉತ್ತರ ಪ್ರದೇಶದ ರಾಜೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಎಡಪದವು ಜಂಕ್ಷನ್ ಬಳಿ ರಸ್ತೆ ಬದಿ ನಿಂತಿದ್ದ ಆಚರ್ ವಾಹನಕ್ಕೆ ಮೂಡಬಿದ್ರೆಯಿಂದ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಈಚರ್ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಚರ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News