×
Ad

ಖಾಸಗಿ ವಾಹನಗಳು ಪ್ರವಾಸಿ ಬಾಡಿಗೆ ಮಾಡುವುದರ ವಿರುದ್ಧ ಟೂರಿಸ್ಟ್ ವಾಹನ ಚಾಲಕ ಮಾಲಕರ ಪ್ರತಿಭಟನೆ

Update: 2016-03-08 20:12 IST

ಉಳ್ಳಾಲ: ಟೂರಿಸ್ಟ್ ವಾಹನಗಳಿಗೆ ಸಿಗುವ ಬಾಡಿಗೆಗೆ ಅಡ್ಡಗಾಲು ಹಾಕಿ ಆ ಕೆಲಸವನ್ನು ಪರವಾನಿಗೆ ಇರುವ ವಾಹನಗಳು ಮಾಡುತ್ತಿದ್ದರೂ, ಅಧಿಕಾರಿಗಳು ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಬದಲು ಅವರ ಜತೆಗೆ ಶಾಮೀಲಾಗಿ ಸರಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ಸಮಸ್ಯೆ ಇತ್ಯರ್ಥ ಕಾಣದಿದ್ದಲ್ಲಿ ಜಿಲ್ಲೆಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ನಿನ ಜಿಲ್ಲೆ ಅಧ್ಯಕ್ಷ ಮೋನಪ್ಪ ಭಂಡಾರಿ ಹೇಳಿದರು. ವರು ತೊಕ್ಕೊಟ್ಟು ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘದ ವತಿಯಿಂದ ಪರವಾನಿಗೆ ಇಲ್ಲದ ಬಸ್ಸುಗಳು ಮತ್ತು ಖಾಸಗಿ ಕಾರುಗಳು ಪ್ರವಾಸಿ ಬಾಡಿಗೆ ಮಾಡುವುದರ ವಿರುದ್ಧವಾಗಿ ಮಂಗಳವಾರ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.್ರಪ್ ನಿಲ್ಲಿಸಿ ಬಾಡಿಗೆ ನಡೆಸುವ ಬಸ್ಸುಗಳ ಪರವಾನಿಗೆಯನ್ನು ರದ್ದುಮಾಡಬೇಕಾದ ಸಾರಿಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಬಾಡಿಗೆ ಸಿಗುವುದಕ್ಕೆ ಅಡ್ಡಗಾಲು ಪರವಾನಿಗೆ ಇರುವ ಇರುವ ಬಸ್ಸುಗಳು, ಖಾಸಗಿ ವಾಹನಗಳು ಮಾಡುತ್ತಿದ್ದರೂ ಪೊಲೀಸರು ಈ ಬಗ್ಗೆ ಗಮನಹರಿಸದ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಬಾಡಿಗೆಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿವೆ. ಈ ಬಗ್ಗೆ ಹಲವು ಬಾರಿ ಆರ್ ಟಿ ಓ, ಪಲೀಸ್ ಕಮೀಷನರ್, ಎಸ್.ಪಿ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಟ್ರಿಪ್ ಕಟ್ ಮಾಡಿ ಹೋಗುವ ಬಸ್ಸುಗಳ ಪರವಾನಿಗೆಯನ್ನು ತಡೆಯುವ ಅಧಿಕಾರ ಸಾರಿಗೆ ಅದಿಕಾರಿಗಳಿಗಿದೆಯಾದರೂ ಅವರು ಅಂತಹ ಕೆಲಸ ಮಾಡದೇ ಅದನ್ನು ಮಾಡದೆ ಅವರ ಜತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
         
 ಟೂರಿಸ್ಟ್ ವಾಹನ ಚಾಲಕರ ಮೂಲ ಸಮಸ್ಯೆಗೆ ಯಾವುದೇ ಕ್ರಮಕೈಗೊಳ್ಳದೆ ಜಿಲ್ಲಾಧಿಕಾರಿ, ಮಂತ್ರಿಗಳು ಹೇಳಿದಂತೆ ಪ್ರಚಾರಕ್ಕಾಗಿ ನಡೆಸುವ ಕಾರ್ಯಕ್ರಮದ ಬದಲು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿ.ತೊಕ್ಕೊಟ್ಟುವಿನಲ್ಲಿ ಸಾಂಕೇತಿಕವಾಗಿ ನಡೆಸಿದ ಪ್ರತಿಭಟನೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ನಡೆಸಲು ತೀರ್ಮಾನಿಸಿ ದಿನ ನಿಗದಿ ಮಾಡಲಾಗಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಉಪಾಧ್ಯಕ್ಷ ದಿನೇಶ್ ಕುಂಪಲ ಮಾತನಾಡಿ, ದಪ್ಪ ಚರ್ಮದ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಿದರೂ ಈವರೆಗೆ ಯಾವುದೇ ಪ್ರಯೋಜನಾವಗದೇ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ.   ಬಾಡಿಗೆ ಇಲ್ಲದೆ ಉಪವಾಸ ಇರುವ ಚಾಲಕರಿಗೆ ಒಂದು ದಿನದ ಉಪವಾಸ ಸತ್ಯಾಗ್ರಹ ಹೊರೆಯಾಗುವುದಿಲ್ಲ. ಟೂರಿಸ್ಟ್ ವಾಹನಗಳ ಹಕ್ಕನ್ನು ಕಸಿದು ಒಂದು ತಿಂಗಳ ಕಾಲ ಖಾಸಗಿ ಕಾರು ರೆಂಟ್ ಕಾರ್ ವ್ಯವಸ್ಥೆಯಲ್ಲಿ ಪಡೆದು ತಿಂಗಳ ಕಾಲ ಬಾಡಿಗೆ ಕೊಟ್ಟರೆ, ಆನ್‌ಲೈನ್ ಕಾರು ಬಾಡಿಗೆ ನೀಡುವವರು ಇನ್ನೊಂದೆಡೆ ಟೂರಿಸ್ಟ್ ವಾಹನ ಚಾಲಕರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಸಂದರ್ಭ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಉಳ್ಳಾಲ ವಲಯದ ಅಧ್ಯಕ್ಷ ಪ್ರಮೋದ್ ಉಳ್ಳಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ, ಉಳ್ಳಾಲ, ಕಮಲಾಕ್ಷ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನವೀನ್, ದೇವೀ, ನ್ ಸರಳಾಯವೀನ್ ಉಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಭಗವಾನದಾಸ್ ಸುಧಾಕರ್ ಪೂಜಾರಿ, ಪ್ರಶಾಂತ್ ಆಳ್ವ , ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಫಾರುಕ್ ಉಳ್ಳಾಲ್, ಯು.ಹೆಚ್.ಫಾರುಕ್ ಮೊದಲಾದವರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News