ಉಳ್ಳಾಲ: ಕಿನ್ಯ ಕೂಟು ಝಿಯಾರತ್‌ಗೆ ಚಾಲನೆ
ಉಳ್ಳಾಲ:ಕಿನ್ಯಗ್ರಾಮಧಾರ್ಮಿಕಕ್ಷೇತ್ರವಾಗಿ ಬೆಳೆಯಲು ಧಾರ್ಮಿಕ ಶಿಕ್ಷಣದ ಬೆಳವಣಿಗೆಗೆ ಇಲ್ಲಿಅಂತ್ಯ ವಿಶ್ರಮಗೊಳ್ಳುತ್ತಿರುವ ಹುಸೈನ್ ಮುಸ್ಲಿಯಾರ್‌ರವರ ಪವಾಢವೇಕಾರಣ. ಅವರದರ್ಗಾಇಲ್ಲದಿದ್ದರೆಇಲ್ಲಿಧಾರ್ಮಿಕ ಶಿಕ್ಷಣ ಬೆಳೆದು ಉನ್ನತ ಹಂತಕ್ಕೆತಲುಪುತ್ತಿರಲಿಲ್ಲ ಎಂದು ಸಯ್ಯಿದ್ ಅಲಿ ಬಾಫಕಿ ತಂಙಳ್ ಹೇಳಿದರು.
ಅವರುಕಿನ್ಯದಲ್ಲಿ ಭಾನುವಾರ ನಡೆದ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ದರ್ಗಾಕೂಟುಝಿಯಾರತ್‌ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾವನ ಸಮುದಾಯದ ಬೆಳವಣಿಗೆಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಅಗತ್ಯವಿದೆ.ಇದುಒಂದಕ್ಕೊಂದು ಪೂರಕವಾಗಿರುವುದರಿಂದಅಧ್ಯಯನಕ್ಕೆ ಮಾರ್ಗ ಸುಗಮವಾಗಿ ಸಿಗುತ್ತದೆ.ಈ ಕಾರ್ಯದಲ್ಲಿಕಿನ್ಯಗ್ರಾಮ ಮುಂದುವರಿದಿದೆ.ಇಲ್ಲಿ ಕಾಲೇಜುಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಿ ಶಿಕ್ಷಣ ಅಭಿವೃದ್ಧಿಗೆಜನರು ಸಹಕರಿಸಬೇಕೆಂದುಕರೆ ನೀಡಿದರು.
ಸಯ್ಯಿದ್‌ಅಮೀರ್ ತಂಙಳ್ ಕಿನ್ಯದುವಾ ನೆರವೇರಿಸಿದರು.ಕಿನ್ಯಕೇಂದ್ರಜುಮಾ ಮಸೀದಿ ಮುದರ್ರಿಸ್‌ಅಬೂಬಕರ್‌ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಿದರು. ವೇದಿಕೆಯಲ್ಲಿಕಿನ್ಯಜುಮಾ ಮಸೀದಿ ಖತೀಬ್ ಖಾಸಿಂ ದಾರಿಮಿ, ಕಿನ್ಯಗ್ರಾ.ಪಂ. ಮಾಜಿಅಧ್ಯಕ್ಷ ಹುಸೈನ್‌ಕುಂಞಿ ಹಾಜಿ, ಕಾರ್ಯದರ್ಶಿ ಅಬೂಸಾಲಿ ಹಾಜಿಕಿನ್ಯ, ಕೋಶಾಧಿಕಾರಿಕುಂಞಿ ಹಾಜಿ, ಉಪಾಧ್ಯಕ್ಷ ಬಶೀರ್ ಕಿನ್ಯ, ಅಹ್ಮದ್‌ಕುಂಞಿ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಕಿನ್ಯಜುಮಾ ಮಸೀದಿ ಅಧ್ಯಕ್ಷ ಸಾಧುಕುಂಞಿ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿದರು.ಕಿನ್ಯಕುತುಬಿಯ್ಯ ಮದ್ರಸದ ಸದ್‌ರ್ ಫಾರೂಕ್‌ದಾರಿಮಿಧನ್ಯವಾದ ಸಮರ್ಪಿಸಿದರು.