ಕಾಸರಗೋಡು: ಚೆರ್ಕಳದಲ್ಲಿ ಸಿ. ಎಂ. ಉಸ್ತಾದ್ ಕೇಸ್ ಡಯರಿ
ಕಾಸರಗೋಡು: ಪ್ರಮುಖ ಪಂಡಿತ, ಸಮಸ್ತ ಉಪಾಧ್ಯಕ್ಷ, ಹಲವಾರು ಮಹಳ್‌ಗಳ ಖಾಝಿಯಾಗಿದ್ದ ಸಿ. ಎಂ. ಅಬ್ದುಲ್ಲ ವೌಲವಿಯವರ ಕೊಲೆ ಪ್ರಕರಣ ನಡೆದು 6 ವರ್ಷಗಳು ಪೂರ್ತಿಯಾದ ಹಿನ್ನಲೆಯಲ್ಲಿ ಎಸ್‌ಕೆಎಸ್‌ಎಸ್‌ಎ್ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಖಾಝಿ ಸಿ. ಎಂ. ಉಸ್ತಾದ್ ಕೇಸ್ ಡಯರಿ ಕಾರ್ಯಕ್ರಮ ಸೋಮವಾರದಂದು ಚೆರ್ಕಳ ಖುವ್ವತ್ತುಲ್ ಇಸ್ಲಾಂ ಮದ್ರಸಾದಲ್ಲಿ ನಡೆಯಿತು. ಸಿಬಿಐಯ ವರದಿ ಎರ್ನಕುಳಂ ಸಿಜೆಎಂ ನ್ಯಾಯಾಲಯ ತಿರಸ್ಕರಿಸಿದ ಹಿನ್ನಲೆಯಲ್ಲಿ ಕಾರ್ಯಕ್ರಮ ಜರಗಿತು. ವಿಚಾರಣೆ ಉತ್ತಮ ರೀತಿಯಲ್ಲಿ ನಡೆಯುತ್ತಿಲ್ಲ ಎಂದೂ ಕೆಲ ಅಕಾರಿಗಳು ಒತ್ತಡಗಳಿಗೆ ಒಳಗಾಗುತ್ತಿದ್ದಾರೆ ಎಂದೂ ಎಸ್‌ಕೆಎಸ್‌ಎಸ್‌ಎ್ ಮುಖಂಡರು ಈಗಾಗಲೇ ಆರೋಪಿಸಿದ್ದಾರೆ. ಲೋಕಲ್ ಪೊಲೀಸರು ಬರೆದು ತಯಾರಿಸಿದ ವರದಿಯ ಬೆನ್ನತ್ತಿ ಸಿಬಿಐ ವರದಿ ತಯಾರಿಸಿದೆ. ಮರನೋತ್ತರ ಪರೀಕ್ಷೆಯಲ್ಲಿ ಖಾಝಿಯ ಕುಟುಂಬಸ್ಥರು, ಖಾಝಿಯ ಹತ್ತಿರ ಇದ್ದವರು ಕೊಲೆ ಸಾಧ್ಯತೆ ಮಾಹಿತಿ ಸೂಚಿಸಿದರೂ ತನಿಖೆಯನ್ನು ಅದರತ್ತ ಕೊಂಡೊಯ್ಯದೆ ಆರೋಪಿಗಳನ್ನು ಸಂರಕ್ಷಿಸುವ ವಿಧಾನದಲ್ಲಿ ತನಿಖೆಯನ್ನು ಕೊನೆಗೊಳಿಸಲಾಗಿದೆ. ಇದರ ವಿರುದ್ಧ ಉಸ್ತಾದ್ ಕೇಸ್ ಡಯರಿ ಕಾರ್ಯಕ್ರಮ ಜರಗಿತು.
ಚೆರ್ಕಳ ಖುವ್ವಯ್ಯತ್ತುಲ್ ಇಸ್ಲಾಂ ಮದ್ರಸಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಇಸ್ಲಾಂಮತ ಶಿಕ್ಷಣ ಮಂಡಳಿ ಅಧ್ಯಕ್ಷ ಪಿ. ಕೆ. ಪಿ. ಅಬ್ದುಸ್ಸಲಾಂ ಮುಸ್ಲಿಯಾರ್, ಸಮಸ್ತ ಕಾರ್ಯದರ್ಶಿ ಕೊಯ್ಯೋತ್ ಉಮ್ಮರ್ ಮುಸ್ಲಿಯಾರ್, ಖಾಝಿ ತ್ವಾಖಾ ಅಹ್ಮದ್ ವೌಲವಿ, ಯು. ಎಂ. ಅಬ್ದುಲ್ ರಹ್ಮಾನ್, ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಎಂ. ಎ. ಖಾಝಿಂ ಮುಸ್ಲಿಯಾರ್, ಮಾಣಿಯೂರು ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವ್, ನಾಸರ್ ಫೈಝಿ ಕೂಡತ್ತಾಯಿ, ಅಬ್ದುಲ್ ರಹ್ಮಾಣ್ ಕಲ್ಲಾಯಿ, ಎಸ್‌ಕೆಎಸ್‌ಎಸ್‌ಎ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು ಮೊದಲಾದವರು ಉಪಸ್ಥಿತರಿದ್ದರು.