ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2016-03-08 23:47 IST
ಬ್ರಹ್ಮಾವರ, ಮಾ.8: ವಿಪರೀತ ಮದ್ಯಸೇವನೆ ಚಟ ಹೊಂದಿದ್ದ ಕಾಡೂರು ಗ್ರಾಮದ ಮುಂಡಾಡಿ ತತ್ತರಮಕ್ಕಿ ನಿವಾಸಿ ಬಾಬಣ್ಣ ನಾಯ್ಕ(46) ಎಂಬವರು ಮಾ.7ರಂದು ಬೆಳಗ್ಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಚಾಂತಾರು ಗ್ರಾಮದ ಗುಲಾಬಿ(80) ಎಂಬವರು ಮಾನಸಿಕವಾಗಿ ನೊಂದು ಮಾ.7ರಂದು ಬೆಳಗ್ಗೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.