×
Ad

ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

Update: 2016-03-08 23:49 IST

ಬಂಟ್ವಾಳ, ಮಾ.8: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಮೊಡಂಕಾಪು ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯರನ್ನು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬಿಸಿಎ ಪರೀಕ್ಷೆಯಲ್ಲಿ 5ನೆ ರ್ಯಾಂಕ್ ಪಡೆದ ಶಾಹಿದಾ, 8ನೆ ರ್ಯಾಂಕ್ ಪಡೆದ ನಸೀಮಾ, ಬಿಬಿಎಂ ಪರೀಕ್ಷೆಯಲ್ಲಿ 10ನೆ ರ್ಯಾಂಕ್ ಪಡೆದ ಪ್ರೀತಿ ಅವರನ್ನು ಕಾಲೇಜಿನ ಜೊತೆ ಕಾರ್ಯದರ್ಶಿ ಭ. ಮರಿಯಾ ಕೃಪಾ ಎ.ಸಿ. ಹಾಗೂ ಪ್ರಾಂಶುಪಾಲ ಪ್ರೊ.ಎಚ್.ಎಸ್.ೆರ್ನಾಂಡಿಸ್ ಸನ್ಮಾನಿಸಿದರು. ಈ ಸಂದರ್ಭ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ರೆನಿಟಾ ವಾಜ್, ರೀಮಾ ಡಿಸೋಜ, ಸೌಜನ್ಯಾರನ್ನು ಗೌರವಿಸಲಾಯಿತು. ಮುಡಿಪು: ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ

ಉಳ್ಳಾಲ, ಮಾ.8: ಇಸ್ಲಾಮ್ ಭಯೋತ್ಪಾದನೆಯನ್ನು ಕಲಿಸಿಲ್ಲ. ಭಯೋತ್ಪಾದನೆಗೆ ಧರ್ಮವಿಲ್ಲ. ಇದನ್ನು ಮಟ್ಟ ಹಾಕಲು ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕೆಂದು ಎಂ.ಎಸ್.ಎಂ. ಜುನೈದ್ ಸಖಾಫಿ ಚಿತ್ರದುರ್ಗ ಹೇಳಿದರು.

ಎಸ್ಸೆಸ್ಸ್ೆ ಮುಡಿಪು ಸೆಕ್ಟರ್ ವತಿಯಿಂದ ಭಯೋತ್ಪಾದನೆಯ ವಿರುದ್ಧ ಜಿಹಾದ್ ಎಂಬ ಧ್ಯೇಯವಾಕ್ಯದೊಂದಿಗೆ ಮುಡಿಪುವಿನಲ್ಲಿ ನಡೆದ ಎಸ್‌ಬಿಎಸ್ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಂಬಾರ್‌ತೋಟ ಮಸೀದಿಯಿಂದ ಮುಡಿಪುವರೆಗೆ ನಡೆದ ಜಾಥಾದ ನೇತೃತ್ವವನ್ನು ಸಿಟಿಎಂ ತಂಳ್ ವಹಿಸಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ಸಿದ್ದೀಕ್ ಹಿಮಮಿ ಸ್ವಾಗತಿಸಿದರು. ಎಸ್‌ಜೆಎಂ ಮುಡಿಪು ರೇಂಜ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ, ಕಾರ್ಯದರ್ಶಿ ಲತ್ೀ ಸಖಾಫಿ, ಮುಡಿಪು ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ, ಎಸ್ಸೆಸ್ಸ್ೆ ಉಳ್ಳಾಲ ಡಿವಿಜನ್ ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್, ಎಸ್ಸೆಸ್ಸ್ೆ ಮುಡಿಪು ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಸಖಾಫಿ, ಕಾರ್ಯದರ್ಶಿ ಇಕ್ಬಾಲ್ ಮದ್ಯನಡ್ಕ, ಜಾಥಾ ಸಮಿತಿ ಸಂಚಾಲಕ ರಫೀಕ್ ಬಾಳೆಪುಣಿ, ಮುಡಿಪು ಎಸ್ಸೆಸ್ಸ್ೆನ ಕೋಶಾಕಾರಿ ಅಝೀಝ್ ಎಚ್‌ಕಲ್ಲು, ಉಳ್ಳಾಲ ಡಿವಿಜನ್ ಎಸ್ಸೆಸ್ಸ್ೆ ಕಾರ್ಯದರ್ಶಿ ಶರ್ೀ ಮುಡಿಪು, ಅಬ್ದುರ್ರಹ್ಮಾನ್ ಮಾಸ್ಟರ್, ಎಂ.ಎಂ.ಕೆ. ಮುಹಮ್ಮದ್ ಮುಸ್ಲಿಯಾರ್, ಸಿರಾಜುದ್ದೀನ್ ಪಡಿಕ್ಕಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News