×
Ad

ಕಲಾವಿದ ವಿಜಯ ಕುಮಾರ್ ಶೆಟ್ಟಿಗೆ ಅಭಿನಂದನೆ

Update: 2016-03-08 23:53 IST

ಉಡುಪಿ, ಮಾ.8: ಲಿಮ್ಕಾ ಸಮನ್ವಿತ ವಿಜಯೋತ್ಸವ ಸಮಿತಿ ತೋನ್ಸೆ ಇದರ ವತಿಯಿಂದ ಉಡುಪಿ ಪುರಭವನದಲ್ಲಿ ನಡೆದ ‘ರಂಗೋತ್ಸವ- ವಿಜಯೋತ್ಸವ’ ಸಮಾರಂಭದಲ್ಲಿ ಲಿಮ್ಕಾ ಬುಕ್ ಆ್ ರೆಕಾರ್ಡ್ ರಾಷ್ಟ್ರೀಯ ಸಾಧನೆಯ ನಾಟಕಕಾರ, ಮುಂಬೈ ಕಲಾ ಜಗತ್ತು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು.

ಅಧ್ಯಕ್ಷತೆಯನ್ನು ಉದ್ಯಮಿ ಡಾ.ಜಿ. ಶಂಕರ್ ವಹಿಸಿದ್ದರು. ಮೂಡು ಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿನಂದನಾ ಭಾಷಣ ಮಾಡಿದರು. ಕಟೀಲು ದೇವಳದ ಅನುವಂಶಿಕ ಆರ್ಚಕ ಶ್ರೀಹರಿ ನಾರಾಯಣ ಅಸ್ರಣ್ಣ, ಸೀತಮ್ಮ, ಮಾಜಿ ಶಾಸಕ ಕೆ.ರಘುಪತಿ ಭಟ್, ಕಲಾ ಜಗತ್ತು ಸಂಚಾಲಕ ರತ್ನಾಕರ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಶಶಿಧರ್ ಶೆಟ್ಟಿ, ದಿವಾಕರ ಶೆಟ್ಟಿ ಇಂದ್ರಾಳಿ, ಮನೋಹರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಜನಾರ್ದನ ತೋನ್ಸೆ, ಅಂಬಾತನಯ ಮುದ್ರಾಡಿ ಉಪಸ್ಥಿತರಿದ್ದರು.

ಈ ಸಂದರ್ಭ ಸಾಧಕರಾದ ಲಕ್ಷ್ಮೀನಾರಾಯಣ ರಾವ್, ನಿತ್ಯಾ ನಂದ ಕೋಟ್ಯಾನ್, ಶಮಿನಾಆಳ್ವ, ತೋನ್ಸೆ ದೇವದಾಸ ಪೈ, ಚಂದ್ರ ಶೇಖರ್ ಪಾಲೆತ್ತಾಡಿಯವರನ್ನು ಸನ್ಮಾನಿಸಲಾಯಿತು. ಸುರೇಂದ್ರ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳ್ಳಿಗೆ ದಯಾಸಾಗರ ಚೌಟ ಕಾರ್ಯಕ್ರಮ ನಿರೂಪಿಸಿದರು.

30 ಪಾತ್ರಗಳ ಪ್ರದರ್ಶನ: ರಂಗೋತ್ಸವ- ವಿಜಯೋತ್ಸವ ಅಭಿ ನಂದನಾ ಸಮಾರಂಭವನ್ನು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್.ಪೈ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ವಹಿಸಿದ್ದರು. ಕೆಮ್ಮಣ್ಣು ಚರ್ಚ್‌ನ ಧರ್ಮಗುರು ರೆ.ಾ.ರ್ಡಿನಾಂಡ್ ಗೊನ್ಸಾಲ್ವಿಸ್, ಕಾಪು ಬಂಟರ ಸಂಘದ ಅಧ್ಯಕ್ಷ ವಾಸುದೇವ ಶೆಟ್ಟಿ, ಉದ್ಯಮಿಗಳಾದ ತೋನ್ಸೆ ರಮಾನಂದ ರಾವ್, ಪುರುಷೋತ್ತಮ ಶೆಟ್ಟಿ, ಡೊಂಬಿವಿಲಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಒಟ್ಟು 30 ವಿವಿಧ ಪಾತ್ರಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಿದರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News