×
Ad

ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಲಿತಾಂಶ ಪ್ರಕಟ

Update: 2016-03-08 23:54 IST

ಉಡುಪಿ, ಮಾ.8: ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ಆಶ್ರಯ ದಲ್ಲಿ ಉಡುಪಿ ಪ್ರೆಸ್ ೊಟೋಗ್ರಾರ್ಸ್‌ ಅಸೋಸಿಯೇಶನ್ (ಉಪ್ಪಾ) ಉಡುಪಿ ಯಲ್ಲಿ ಪೇಜಾವರ ವಿಶ್ವೇಶತೀರ್ಥರ ಐತಿ ಹಾಸಿಕ ಐದನೆ ಪರ್ಯಾಯದ ಅಂಗವಾಗಿ ಏರ್ಪಡಿಸಿದ್ದ ‘ವಿಶ್ವವರ್ಣ’ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಲಿತಾಂಶವನ್ನು ಪ್ರಕಟಿಸಲಾಗಿದೆ.

ಸತೀಶ್ ಶೇರಿಗಾರ್ ಪ್ರಥಮ ಬಹುಮಾನ 10,000 ರೂ.ಗಳಿಗೆ ಭಾಜನರಾದರೆ, ಸಂದೀಪ್ ನಾಯಕ್ ದ್ವಿತೀಯ 5,000 ರೂ. ಹಾಗೂ ನಿದೇಶ್ ಕುಮಾರ್ 3,000 ರೂ.ಗಳ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಐದು ಮಂದಿ ಛಾಯಾಗ್ರಾಹಕರು- ಶೈಲಾ ಮಿನೇಜಸ್, ಪ್ರದೀಪ್ ಉಪ್ಪೂರ್, ವಿಜಯೇಂದ್ರ ಅಂಬಲಪಾಡಿ, ಪ್ರಸನ್ನ ಪೆರ್ಡೂರ್, ಪ್ರೇಮ್ ಮಿನೇಜಸ್- ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ. ಇವರಿಗೆ ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು.

ಖ್ಯಾತ ಛಾಯಾಚಿತ್ರಗ್ರಾಹಕ ಎ.ಈಶ್ವರಯ್ಯ ಹಾಗೂ ಕಲಾವಿದ ರಮೇಶ್ ರಾವ್ ತೀರ್ಪುಗಾರರಾಗಿ ಸಹಕರಿಸಿದರು.

ಪೇರಡ್ಕ ಮುಖಾಂ ಉರೂಸ್‌ಗೆ ಚಾಲನೆ

ಸುಳ್ಯ, ಮಾ.8: ವಲಿಯುಲ್ಲಾಹಿ ದರ್ಗಾ ಶರ್ೀ ಪೇರಡ್ಕ ಇದರ ಉರೂಸ್ ಕಾರ್ಯಕ್ರಮಕ್ಕೆ ಜಮಾಅತ್ ಅಧ್ಯಕ್ಷ ಆಲಿ ಹಾಜಿ ಧ್ವಜಾರೋಹಣ ಮಾಡುವುದರೊಂದಿಗೆ ಚಾಲನೆ ನೀಡಿದರು.

ಖತೀಬ್ ಇಬ್ರಾಹೀಂ ೈಝಿ ದುಆ ಮಾಡಿದರು. ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ. ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಸ್.ಪಿ.ಅಬ್ದುರ್ರಹ್ಮಾನ್, ಎಂಆರ್‌ಡಿಎ ಅಧ್ಯಕ್ಷ ಇಸ್ಮಾಯೀಲ್ ಐ., ಝಕರಿಯ ದಾರಿಮಿ, ಪಿ.ಎ. ಮೂದ್ ಹಾಜಿ, ಸುಲೈಮಾನ್ ಮುಸ್ಲಿಯಾರ್, ಎ.ಎ. ಹನ್ೀ ಅರಂತೋಡು,ಎಸ್.ಕೆ. ಹನ್ೀ ಸಂಪಾಜೆ, ಜಮಾಅತ್ ಕಾರ್ಯದರ್ಶಿ ಪಿ.ಕೆ ಉಮರ್, ಮಾಜಿ ಅಧ್ಯಕ್ಷ ಸೈದು ಹಾಜಿ, ಮೈಲುಕಲ್ಲು ಇಬ್ರಾಹೀಂ, ಉರೂಸ್ ಸಮಿತಿ ಕಾರ್ಯದರ್ಶಿ ಜಿ.ಕೆ. ಹಮೀದ್, ಹಾಜಿ ಎಸ್.ಇ. ಮುಹಮ್ಮದ್, ಕೆ.ಎಂ. ಅಬೂಬಕರ್ ಪಾರೆಕ್ಕಲ್, ಮನ್ಸೂರ್ ಪಾರೆಕ್ಕಲ್, ಜುವೈದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News