ಇಂದಿನಿಂದ ಕೇರಳ ಎಸ್ ಎಸ್ ಎಲ್ ಸಿ, ಹಯರ್ ಸೆಕಂಡರಿ ವಾರ್ಷಿಕ ಪರೀಕ್ಷೆ
Update: 2016-03-09 11:06 IST
ಕಾಸರಗೋಡು, ಮಾ.9 : ಕೇರಳ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಇಂದು ಮಧ್ಯಾಹ್ನ 1.45 ರಿಂದ ಆರಂಭಗೊಳ್ಳಲಿದೆ.
ಈ ಬಾರಿ 4,76, 877 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈ ಪೈಕಿ 2,33,094 ವಿದ್ಯಾರ್ಥಿನಿಯರು, 2, 41, 192 ವಿದ್ಯಾರ್ಥಿಗಳಾಗಿದ್ದಾರೆ. ಕಳೆದ ವರ್ಷಕ್ಕಿಂತ ಆರು ಸಾವಿರ ವಿದ್ಯಾರ್ಥಿಗಳು ಅಧಿಕವಾಗಿದ್ದಾರೆ. ಮಾರ್ಚ್ 23 ರಂದು ಪರೀಕ್ಷೆ ಕೊನೆಗೊಳ್ಳಲಿದೆ.
ಎಪ್ರಿಲ್ 25 ರೊಳಗೆ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಎಲ್ಲಾ ಸಿದ್ದತೆ ನಡೆಸುತ್ತಿದೆ.
ಪ್ರಥಮ ಮತ್ತು ದ್ವಿತೀಯ ವರ್ಷದ ಹಯರ್ ಸೆಕಂಡರಿ ಪರೀಕ್ಷೆ ಕೂಡಾ ಇಂದು ಆರಂಭಗೊಳ್ಳುತ್ತಿದ್ದು , 9, 33, 050 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.