ಬೆಳ್ತಂಗಡಿ: ಬಸ್ ತಡೆದು ಚಾಲಕ - ಸಿಬ್ಬಂದಿಗೆ ಹಲ್ಲೆಗೈದು ದರೋಡೆ ಮಾಡಿದ ತಂಡ: ದೂರು
Update: 2016-03-09 12:57 IST
ಬೆಳ್ತಂಗಡಿ, ಮಾ.9: ಇಲ್ಲಿಗೆ ಸಮೀಪದ ಪಡಂಗಡಿಯಲ್ಲಿ ಸುಗಮ ಬಸ್ ಚಾಲಕ ಶಂಕರ್ ಮತ್ತು ಇತರ ಸಿಬ್ಬಂದಿಗೆ ರೌಡಿ ಶೀಟರ್ ಪುಣೀತ್ , ಪ್ರಕಾಶ್ ಪುಜಾರಿ ಮತ್ತು ಇತರ ಇಬ್ಬರು ಸೇರಿ ತಲವಾರ್ ನಿಂದ ಹಲ್ಲೆ ಮಾಡಿ ವಾಚ್ ಮತ್ತು ಹಣ ದರೋಡೆ ಮಾಡಿದ ಘಟನೆ ನಿನ್ನೆ ರಾತ್ರಿ 11 ಗಂಟೆಗೆ ನಡೆದಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಣೇತ್ ಬೆಳ್ತಂಗಡಿಯ ಯುವತಿಯ ಕೊಲೆ ಮತ್ತು ಮಂಗಳೂರಿನ ಕರಾವಳಿ ಕಾಲೇಜ್ ಬಳಿ ಬೈಕ್ ನಲ್ಲಿ ಪಿಸ್ತೂಲ್ ಹಿಡಿದು ಸಿಕ್ಕಿ ಬಿದ್ದು ಜೈಲು ಸೇರಿ ಹೋರ ಬಂದಿದ್ದ. ಪ್ರಕಾಶ್ ಪುಜಾರಿ 5 ವರ್ಷದ ಹಿಂದೆ ಬೆಳ್ತಂಗಡಿಯ ಮೂರು ಮಾರ್ಗದ ಗಣೇಶ್ ಹೋಟೆಲ್ ನಲ್ಲಿ ವಿಸಿಲ್ ವಿಶ್ವ ನನ್ನು ಕೊಲೆ ಮಾಡಿದ ಅರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.