ಮುಂದಿನ 6 ತಿಂಗಳಲ್ಲಿ ಸೌದಿಯ ಎಲ್ಲಾ ಮೊಬೈಲ್ ಕಂಪೆನಿ ಉದ್ಯೋಗಗಳೂ ದೇಶೀಯರಿಗೆ
ಜಿದ್ದಾ : ಸೌದಿ ನಾಗರಿಕರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುವ ಸಲುವಾಗಿ ಸೌದಿ ಅರೇಬಿಯಾದಲ್ಲಿರುವ ಮೊಬೈಲ್ ಫೋನ್ ಕಂಪೆನಿಗಳಲ್ಲಿನ ಎಲ್ಲಾ ಹಂತದ ಉದ್ಯೋಗಗಳನ್ನು ಸೌದಿ ನಾಗರಿಕರಿಗೇ ಸೆಪ್ಟಂಬರ್ 2ರ ಒಳಗಾಗಿ ಒದಗಿಸಬೇಕೆಂದು ಕಾರ್ಮಿಕ ಸಚಿವ ಮುಫ್ರೇರ್ ಅಲ್-ಹಖಬನಿ ಆದೇಶಿಸಿದ್ದಾರೆ. ಮಾರಾಟ, ನಿರ್ವಹಣೆ ಹಾಗೂ ಬಿಡಿಭಾಗಗಳ ವಿಭಾಗಗಳಲ್ಲೂ ಸೌದಿ ನಾಗರಿಕರನ್ನೇ ನೇಮಿಸಬೇಕೆಂಬ ಆದೇಶವಿದೆ.
ವಾಣಿಜ್ಯ ಹಾಗೂ ಉದ್ಯಮ, ಮುನಿಸಿಪಲ್, ಗ್ರಾಮೀಣ ವ್ಯವಹಾರ ಹಾಗೂ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳ ಸಹಕಾರದೊಂದಿಗೆಈ ಆದೇಶವನ್ನು ಜಾರಿಗೊಳಿಸಲಾಗುವುದೆಂದು ಹೇಳಲಾಗಿದೆ.
ಸಂಬಂಧಿತಕಂಪೆನಿಗಳು ಹಾಗೂ ಉದ್ಯೋಗಿಗಳಿಗೆ ನೋಟಿಸ್ ಈಗಾಗಲೇ ಜಾರಿಯಾಗಿದ್ದುಶೇ.50ರಷ್ಟು ಉದ್ಯೋಗಗಳನ್ನು ಮುಂದಿನ ಮೂರು ತಿಂಗಳೊಳಗೆ ಸೌದಿ ನಾಗರಿಕರಿಗೇ ನೀಡಬೇಕೆಂದು ಹಾಗೂ ಆರು ತಿಂಗಳೊಳಗೆ ಅಂದರೆ ಸೆಪ್ಟೆಂರ್ 2ರಳೊಳಗಾಗಿ ಶೇ.100ರಷ್ಟು ಉದ್ಯೋಗಗಳು ಸೌದಿಗಳ ಪಾಲಾಗಬೇಕೆಂದೂ ಆದೇಶಿಸಲಾಗಿದೆ.
ಸೌದಿ ನಾಗರಿಕರಿಗೆ ಆರ್ಥಿಕ ಸುದೃಢತೆ ಸಾಧಿಸಲು ಈ ಆದೇಶ ಸಹಕಾರಿಯಾಗುವುದೆಂದು ಹೇಳಲಾಗಿದೆ ಹಾಗೂ ಅದು ಎಲ್ಲಾ ಸಣ್ಣ, ವಧ್ಯಮ ಹಾಗೂ ಬೃಹತ್ ಮೊಬೈಲ್ ಕಂಪೆನಿಗಳಿಗೂ ಅನ್ವಯವಾಗುವುದು. ಆದೇಶ ಜಾರಿಗೊಳಿಸಲು ವಿಫಲರಾದವರಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುವುದೆಂದು ಎಚ್ಚರಿಸಲಾಗಿದೆ.