×
Ad

ತನ್ನ ಅಶ್ಲೀಲ ಹೇಳಿಕೆಗೆ ವಿಷಾದ ಸೂಚಿಸಿದ ತೆಲುಗು ನಟ ಬಾಲಕೃಷ್ಣ

Update: 2016-03-09 15:20 IST

ಹೈದರಾಬಾದ್, ಮಾ. 9: ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ ತೆಲುಗು ನಟ ಬಾಲಕೃಷ್ಣರ ವಿರುದ್ಧ ಪ್ರತಿಭಟನೆ ಎದುರಾದ್ದರಿಂದ ತನ್ನ ಹೇಳಿಕೆಯನ್ನು ಹಿಂಪಡೆದು ವಿಷಾದ ಸೂಚಿಸಿದ್ದಾರೆ.

ಯಾವುದೇ ಹೆಮ್ಮಕ್ಕಳ ಹಿಂದೆ ನಡೆಯುವುದು ತನ್ನ ಅಭಿಮಾನಿಗಳಿಗೆ ಇಷ್ಟವಿಲ್ಲ. ನಾನು ಅವರನ್ನು ಚುಂಬಿಸಬೇಕಾಗಿದೆ ಮತ್ತು ಗರ್ಭಿಣಿಯರನ್ನಾಗಿಸಬೇಕಾಗಿದೆ ಎಂದು ಬಾಲಕೃಷ್ಣ ಹೇಳಿದ್ದರೆನ್ನಲಾಗಿದೆ.

ಹೈದರಾಬಾದ್‌ನಲ್ಲಿ ನಡೆದ ಸಿನೆಮಾವೊಂದರ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ತೆಲುಗು ನಟ ಅಶ್ಲೀಲ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದೆ. ಬಾಲಕೃಷ್ಣ ತೆಲುಗು ದೇಶಂ ಪಾರ್ಟಿಯ ಹಿಂದೂಪುರ್ ಶಾಸಕ ಕೂಡಾ ಆಗಿದ್ದಾರೆ.

ಈ ಹೇಳಿಕೆ ವೇದಿಕೆಯಲ್ಲಿದ್ದ ಮಹಿಳೆಯರನ್ನೇ ಮುಜುಗರಗೊಳಿಸಿತ್ತು. ಹಿರಿಯ ರಾಜಕಾರಣಿಗಳಿಗೆ ಮಹಿಳೆಯರನ್ನು ಗೌರವಿಸಲು ತಿಳಿಯದಿದ್ದರೆ ಇಲ್ಲಿನ ಮಹಿಳೆಯರ ಸ್ಥಿತಿ ಹೇಗಿರಬಹುದೆಂದು ವೈಎಸ್ಸಾರ್ ಕಾಂಗ್ರೆಸ್‌ನ ನಾಯಕಿ ರೋಜಾ ಪ್ರಶ್ನಿಸಿದ್ದಲ್ಲದೆ, ಬಾಲಕೃಷ್ಣ ಮಹಿಳೆಯರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಈ ವೇಳೆ ಬಾಲಕೃಷ್ಣ ಅವರ ಮಹಿಳಾ ವಿರೊಧಿ ಹೇಳಿಕೆಗೆ ವಿಷಾದ ಸೂಚಿಸಿದ್ದಾರೆ. ಅಭಿಮಾನಿಗಳು ಏನನ್ನು ಚಿಂತಿಸುತ್ತಿದ್ದಾರೆ ಎಂದು ತಾನು ಹೇಳಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆಯ ಕುರಿತು ತನಿಖೆ ಮಾಡಿದ ನಂತರವೇ ಎಫ್‌ಐಆರ್ ದಾಖಲಿಸಲಾಗುವುದೆಂದು ಆಂಧ್ರ ಪೊಲೀಸರು ಹೇಳಿದ್ದಾರೆ.

ಹೊಸ ಚಿತ್ರವಾದ ಸಾವಿತ್ರಿಯ ಆಡಿಯೊ ರಿಲೀಸ್ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಈ  ಅಶ್ಲೀಲ ಪರಾಮರ್ಶೆ ನಡೆಸಿದ್ದಾರೆ. ಬಾಲಕೃಷ್ಣ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್‌ಟಿ ರಾಮರಾವ್ ಅವರ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News