×
Ad

ಮೂಡುಬಿದಿರೆ : ಮುಖ್ಯಮಂತ್ರಿಯಿಂದ ಚಿಕಿತ್ಸಾ ಪರಿಹಾರ ಚೆಕ್ ವಿತರಣೆ

Update: 2016-03-09 18:08 IST

 ಮೂಡುಬಿದಿರೆ : ಕಳೆದ ಬಾರಿ ಮೂಡುಬಿದಿರೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಿರುವ ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಕೊಪ್ಪದಕುಮೇರಿನ ಅಂಗಡಿಗುತ್ತು ನಿವಾಸಿ ದಯಾನಂದ ಶೆಟ್ಟಿ ಅವರ ಪುತ್ರ ಅಂಬರೀಷ್ ಅವರಿಗೆ ಮುಖ್ಯಮಂತ್ರಿಯಿಂದ ದೊರೆತಿರುವ 50,000 ಚಿಕಿತ್ಸಾ ಪರಿಹಾರ ಚೆಕ್ಕನ್ನು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಅವರು ತನ್ನ ನಿವಾಸದಲ್ಲಿ ಮಂಗಳವಾರದಂದು ವಿತರಿಸಿದರು.  ಈ ಸಂದರ್ಭದಲ್ಲಿ ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಸುರೇಶ್ ದೇವಾಡಿಗ, ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಪಿ.ಕೆ.ತೋಮಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಹೊಸಬೆಟ್ಟು ಗ್ರಾ.ಪಂ ಸದಸ್ಯ ಚಂದ್ರಹಾಸ ಸನಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News