ಕಾರ್ಕಳ : ಹಾರ್ಡ್‌ವೇರ್ ಅಂಗಡಿಗೆ ಬೆಂಕಿ : 12 ಲಕ್ಷ ರೂ. ನಷ್ಟ
Update: 2016-03-09 18:58 IST
ಕಾರ್ಕಳ : ಮುಡಾರು ಗ್ರಾಮದ ಬಜಗೋಳಿ ವರ್ಷಿಕಾ ಹಾರ್ಡ್‌ವೇರ್‌ಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಇಲೆಕ್ಟ್ರಿಕಲ್ ಉಪರಕರಣಗಳು, ಸಿಸಿ ಟಿವಿ, ಕಂಪ್ಯೂಟರ್ ಮತ್ತು ಡ್ರವರ್‌ನಲ್ಲಿದ್ದ 30 ಸಾವಿರ ರೂ ನಗದು ಹಣ ಸೇರಿದಂತೆ ಒಟ್ಟು 12 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ನೆರವಾಗಿದ್ದರು.