ವಿಟ್ಲ : ಮಾ, 12 ರಂದು ತಾಳಿತ್ತನೂಜಿ ಮದ್ರಸ ನೂತನ ಕಟ್ಟಡ ಉದ್ಘಾಟನೆ
ವಿಟ್ಲ : ಇಲ್ಲಿಗೆ ಸಮೀಪದ ತಾಳಿತ್ತನೂಜಿ ಎಂಬಲ್ಲಿ ನಿರ್ಮಾಣಗೊಂಡ ನೂತನ ಮದ್ರಸ ಕಟ್ಟಡದ ಉದ್ಘಾಟನೆ ಹಾಗೂ ಮುಹಿಯದ್ದೀನ್ ಮದ್ರಸದಲ್ಲಿ ನಡೆಯುತ್ತಿರುವ ಕುತುಬಿಯ್ಯತ್ ನೇರ್ಚೆಯ 28ನೇ ವಾರ್ಷಿಕ ಕಾರ್ಯಕ್ರಮವು ಮಾ 12 ರಂದು ನಡೆಯಲಿದೆ ಎಂದು ಮದ್ರಸ ಸಮಿತಿ ಅಧ್ಯಕ್ಷ ಪಿ. ಮಹಮ್ಮದ್ ತಿಳಿಸಿದರು. ವಿಟ್ಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಜೇಶ್ವರ-ಉದ್ಯಾವರದ ಶೈಖುನಾ ಹಾಜಿ ಸಯ್ಯಿದ್ ಪೂಕುಂಞಿಕೋಯ ತಂಙಳ್ ಮದ್ರಸ ಕಟ್ಟಡವನ್ನು ಉದ್ಘಾಟಿಸುವರು. ಕುಂಬಳೆ ಇಮಾಮ್ ಶಾಫಿ ಅಕಾಡೆಮಿಯ ಪ್ರೋ. ಅನ್ವರಲಿ ಹುದವಿ ಚೆಮ್ಮಾಡ್ ಮುಖ್ಯ ಭಾಷಣಗೈಯುವರು. ಕಬಕ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ.ಎಂ. ಮುಹಮ್ಮದ್ ಮದನಿ, ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಉದ್ಯಮಿಗಳಾದ ಹಾಜಿ ಜಿ. ಅಬೂಬಕ್ಕರ್ ಗೋಲ್ತಮಜಲು, ಕೆ.ಎಸ್. ಇಸ್ಮಾಯಿಲ್ ಕಲ್ಲಡ್ಕ, ತಾಳಿತ್ತನೂಜಿ ಟಿಜೆಎಂ ಖತೀಬ್ ಸಿ.ಎಚ್. ಇಬ್ರಾಹಿಂ ಮುಸ್ಲಿಯಾರ್, ಬಾರೆಬೆಟ್ಟು ಖತೀಬ್ ಮುಹಮ್ಮದ್ ಸಅದಿ, ತಾಳಿತ್ತನೂಜಿ ಬಿಜೆಎಂ ಖತೀಬ್ ಅಶ್ರಫ್ ಮದನಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಪಿ ಮಹಮ್ಮದ್ ತಾಳಿತ್ತನೂಜಿ, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಸಫ್ವಾನ್ ಮದಕ, ಜತೆ ಕಾರ್ಯದರ್ಶಿ ಟಿ. ಮಹಮ್ಮದ್, ಕೋಶಾಧಿಕಾರಿ ಪಿ. ಯೂಸುಫ್, ಇಸಾಕ್ ಮೊದಲಾದವರು ಉಪಸ್ಥಿತರಿದ್ದರು.