×
Ad

ಜಾತಿ ವ್ಯವಸ್ಥೆ ಅಸಮಾನತೆಗೆ ಕಾರಣವಾಗುತ್ತಿದೆ,ಸಮಾಜ ಪ್ರಜಾಪ್ರಭುತ್ವವನ್ನು ಮಾತ್ರ ಒಪ್ಪಲು ಸಾಧ್ಯ - ಡಾ.ಕೆ.ಎಸ್ ಭಗವಾನ್

Update: 2016-03-09 20:48 IST


ಕಾಸರಗೋಡು:   ಜಾತಿ ವ್ಯವಸ್ಥೆ  ಅಸಮಾನತೆಗೆ ಕಾರಣವಾಗುತ್ತಿದೆ. ಸಮಾಜ ಪ್ರಜಾಪ್ರಭುತ್ವವನ್ನು ಮಾತ್ರ ಒಪ್ಪಲು ಸಾಧ್ಯ ಎಂದು ಖ್ಯಾತ  ಸಾಹಿತಿ  ಡಾ.ಕೆ.ಎಸ್ ಭಗವಾನ್   ಅಭಿಪ್ರಾಯಪಟ್ಟರು .
ಅವರು ಬುಧವಾರ    ಕಾಸರಗೋಡು ಪುರಭವನದಲ್ಲಿ ಇ. ಎಂ. ಎಸ್  ಸ್ಮಾರಕ ಗ್ರಂಥಾಲಯ ವತಿಯಿಂದ  ಕಾಸರಗೋಡು ಪುರಭವನದಲ್ಲಿ  ಪ್ರಜಾಪ್ರಭುತ್ವ - ಜಾತ್ಯಾತೀತ  ದೇಶಾಭಿಮಾನ  ಎಂಬ ಸ್ನೇಹಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಾವ ಜನ , ಯಾವ ಮತ , ಯಾವ ಸಮಾಜವು ಚರ್ಚೆ , ವಿಮರ್ಶೆ , ಭಿನ್ನಾಭಿಪ್ರಾಯಕ್ಕೆ ಅವಕಾಶ  ಕೊಡುವುದಿಲ್ಲವೋ   ಆ  ಸಮಾಜ  , ಜನ  ಅವನತಿ ಹೊಂದುತ್ತಾರೆ. ಚರ್ಚೆ , ಭಿನಾಭಿಪ್ರಾಯ ಅಗತ್ಯ.  ಸಮಾನತೆ , ಸಹೋದರತೆ ಪ್ರಶ್ನಿಸುವವರ  ತಲೆ , ನಾಲಗೆ ಕತ್ತರಿಸಲು ಕೊಟೇಶನ್ ಕೊಡಲಾಗುತ್ತಿದೆ. ದೆಹಲಿ ಜೆ ಎನ್ ಯು  ಕಾಲೇಜಿನ ವಿದ್ಯಾರ್ಥಿ ಕನ್ನಯ್ಯ ಕುಮಾರ್  ರವರ ತಲೆ ಕತ್ತರಿಸಿದವರಿಗೆ   ೧೧ ಲಕ್ಷ ರೂ ., ನಾಲಗೆ ಕತ್ತರಿಸುವವರಿಗೆ ೫ ಲಕ್ಷ ರೂ . ನೀಡುವುದಾಗಿ ಸಂಘಟನೆ ಯೊಂದು   ಘೋಷಿಸಿದೆ. ಇದರಿಂದ  ಅಸಹನೆ ವಿರುದ್ದ ಧ್ವನಿ ಎತ್ತಿದವರನ್ನು ಕೊಳ್ಳಲು , ಬಾಯ್ಮಿಚ್ಚಿಸಲು ಇಂತಹ ವರು  ಮುಂದೆ  ಬಂದಿದ್ದಾರೆ ಎಂದು  ಹೇಳಿದರು .
೩೧ ಶೇಕಡಾ ಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರಕಾರ ಅಸಹಿಶಿಷ್ಣು ತೆ   ಹರಡಿಸುತ್ತಿದೆ.  ಉಳಿದ ೬೯ ಶೇಕಡಾ ಮತಗಳು ಒಂದಾದರೆ ಇವರನ್ನು ಕಿತ್ತು ಬಿಸಾಡಬಹುದು. ೧೯೭೭ ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿಗೆ ತಂದ ಸಂದರ್ಭ ದಲ್ಲಿ ನಡೆದ ಚುನಾವಣೆ ಯಲ್ಲಿ  ಪಾಠ ಕಳಿಸಿದ ಜನತೆ , ಇಂದು ಕೂಡಾ ಒಂದಾದರೆ ಇಂತಹ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ   ಸಿ . ಎಚ್    ಕುನ್ಚಂಬು  ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ  ಕೆ   ಇ . ಏನ್ ಕುನ್ಚಮ್ಮದ್,  ಪ್ರಾಂತ್ಯ ಗ್ರಂಥಾಲಯ  ಸಮಿತಿ ಕಾರ್ಯದರ್ಶಿ ಪಿ . ವಿ . ಕೆ ಪನಯಾಲ್,  ಪಿ . ದಾಮೋದರನ್ , ಕೆ.ಎ ಮುಹಮ್ಮದ್ ಹನೀಪ್ , ಕೆ . ಪಿ  ಸತೀಶ್ಚಂದ್ರನ್, ಅಜೀಜ್ ಕಡಪ್ಪುರ ಮೊದಲಾದವರು ಉಪಸ್ಥಿತರಿದ್ದರು .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News