ಭಟ್ಕಳ: ಪೊಲೀಸ್ ಠಾಣೆಯಲ್ಲೇ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮಾರಾಮಾರಿ, ಎರಡೂ ಪಕ್ಷದ ಮುಖಂಡರ ಬಂಧನ
ಭಟ್ಕಳ:ಬಿಜೆಪಿ ಕಾರ್ಯಕರ್ತನೊಬ್ಬ ವಾಟ್ಸ್‌ಅಪ್ ನಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ ವಿಠ್ಠಲ್ ನಾಯ್ಕ ರ ವಿರುದ್ಧ ಅವಹೇಳನ ಬರಹ ಕಳಿಸಿದ್ದರ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಕಲಹದಲ್ಲಿ ಬುಧವಾರ ಬಿಜೆಪಿ
ಮುಖಂಡರು ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕರ ಮೇಲೆ ಪೊಲೀಸ್ ಠಾಣೆಯಲ್ಲೇ ಹಲ್ಲೆ ಮಾಡಿದ್ದಾಗಿ ತಿಳಿದುಬಂದಿದ್ದು ಘಟನೆ ಕುರಿತಂತೆ ಬಿಜೆಪಿಯ ಗೋವಿಂದ ನಾಯ್ಕ ಕೃಷ್ಣ ನಾಯ್ಕ, ಹನುಮಂತ ಕಾಂಗ್ರೇಸ್ ಪಕ್ಷದ ವಿಠ್ಠಲ್ ನಾಯ್ಕ ತಿರುಮಲ ನಾಯ್ಕ ಸೇರಿದಂತೆ 10 ಕ್ಕೂ ಮಂದಿಯನ್ನು ಬಂಧಿಸಿದ್ದಾರೆ. ಘಟನೆಯ ವಿವರ: ಬಿಜೆಪಿಯ ತುಳಸಿದಾಸ್ ಎಂಬಾತನು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕರ ಕುರಿತಂತೆ ಅವಹೇಳನಕಾರಿಯಾಗಿ ವಾಟ್ಸ್‌ಅಪ್ ಸಂದೇಶವನ್ನು ಹರಿಯಬಿಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ವಿಠ್ಠಲ್ ನಾಯ್ಕರು ತುಳಸಿದಾಸ್ ನನ್ನು ವಿಚಾರಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ವಿಷಯ ತಿಳಿದ ಬಿಜೆಪಿಯ ಮುಖಂಡ ಗೋವಿಂದ ನಾಯ್ಕ ಹಾಗೂ ಇತರರು ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಎದುರೇ ಕಾಂಗ್ರೆಸ್ ಮುಖಂಡ ವಿಠ್ಠಲ್ ನಾಯ್ಕರ ಮೇಲೆ ಹಲ್ಲೆ ನಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂಬ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು ತಮ್ಮ ಮುಖಂಡರ ಬಂಧನವನ್ನು ವಿರೋಧಿಸಿ ರಾತ್ರಿ ಗಂಟೆಗೆ ನಗರ ಠಾಣೆಗೆ ಮುತ್ತಿಗೆ ಹಾಕಿದ್ದು ಲಾಠಿ ಬೀಸುವುದರ ಮೂಲಕ ಪೊಲೀಸರು ಜನರನ್ನು ಚದುರಿಸಿದರು. ಉದ್ರಿಕ್ತ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾಗಿ ತಿಳಿದುಬಂದಿದೆ.. ರಾತ್ರಿ 8.40 ಸುಮಾರು ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಸ್ಥಳದಲ್ಲೇ ಹಾಜರಿದ್ದು ಕಾನೂನು ಸುವೆವಸ್ಥೆ ಕಾಪಾಡಿಕೊಂಡರು.