ಸುರತ್ಕಲ್: ರಿಕ್ಷಾ - ಕಾರು ಡಿಕ್ಕಿ, ರಿಕ್ಷಾ ಚಾಲಕ ಸ್ಥಳದಲ್ಲೆ ಸಾವು
Update: 2016-03-09 22:28 IST
ಸುರತ್ಕಲ್, ಮಾ.9: ಅಟೊ ರಿಕ್ಷಾ ಮತ್ತು ಮಾರುತಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮುಕ್ಕ ಪಡ್ರೆ ಪೆಟ್ರೋಲ್ ಪಂಪ್ ಬಳಿಯ ರಾ.ಹೆ. 66 ರಲ್ಲಿ ನಡೆದಿದೆ.
ಘಟನೆಯಲ್ಲಿ ಪಕ್ಷಿಕೆರೆಯ ರಿಕ್ಷಾ ಚಾಲಕ ಸದಾನಂದ ಸುವರ್ಣ ಸ್ಥಳದಲ್ಲೇ ಸಾವನ್ನಪ್ಪಿದವರು.
ಇವರು ಪಕ್ಷಿಕೆರೆಯಿಂದ ಪಡ್ರೆಗೆ ಬಾಡಿಗೆ ತೆರಳಿ ಪಕ್ಷಿಕೆರೆಗೆ ಹೊಂದಿರುಗುತ್ತಿದ್ದ ವೇಳೆ ಪಡ್ರೆಯ ಪೆಟ್ರೋಲ್ ಪಂಪ್ ಬಳಿ ರಾ.ಹೆ. 66. ದಾಟುತ್ತಿದ್ದ ವೇಳೆ ಉಡುಪಿಕಡೆಯಿಂದ ಅತಿ ವೇಗದಿಂದ ಬಂದ ಬಂದ ಸ್ವಿಪ್ಟ್ ಕಾರು ಡಿಕ್ಕಿ ಹೊಡೆಯಿತೆನ್ಬಲಾಗಿದೆ.
ಡಿಕ್ಕಿಯ ಸಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಸದಾನಂದ ಸುವರ್ಣ ಸ್ಥಳದಲ್ಲೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ಸುರತ್ಕಲ್ ಉತ್ತರ ವಲಯ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡೊದ್ದಾರೆ.