ಈಜಿಪ್ಟ್‌ನಲ್ಲಿ ರಸ್ತೆ ಅಪಘಾತ: ಹದಿನೆಂಟು ಮಂದಿ ಮೃತ್ಯು

Update: 2016-03-10 06:32 GMT

ಕೈರೊ,ಮಾರ್ಚ್.10: ಈಜಿಪ್ಟ್‌ನ ಉತ್ತರ ಸಿನಾಯಿ ಪ್ರಾಂತದಲ್ಲಿ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಫಘಾತದಲ್ಲಿ ಕನಿಷ್ಠ ಹದಿನೆಂಟು ಮಂದಿ ಮೃತರಾಗಿದ್ದಾರೆ. ಮೃತರಲ್ಲಿ ಹನ್ನೆರಡು ಮಂದಿ ಪೊಲೀಸರು ಮತ್ತು ನಾಲ್ವರು ವಿದ್ಯಾರ್ಥಿಗಳು. ಈ ದುರ್ಘಟನೆ ನಿನ್ನೆ ತಡ ರಾತ್ರಿ ಅಬೂ ರದೀಸ್ ತುರ್ ಹೈವೆಯಲ್ಲಿ ನಡೆದಿದೆ.ಗೃಹ ಸಚಿವಾಲಯ ಹೊರಡಿಸಿರುವ ಹೇಳಿಕೆಯಲ್ಲಿ ಈ ವಿವರವನ್ನು ತಿಳಿಸಲಾಗಿದೆ.

ಮೃತರನ್ನು ಈವರೆಗೆ ಗುರುತಿಸಲಾಗಿಲ್ಲ. ಅಪಘಾತವಾಗಲು ಸರಿಯಾದ ಕಾರಣವಿನ್ನೂ ತಿಳಿದು ಬಂದಿಲ್ಲ. ಈಜಿಪ್ಟ್ ಜಗತ್ತಿನಲ್ಲಿಯೇ ಅಪಘಾತ ದರದಲ್ಲಿ ಉನ್ನತ ಸ್ಥಾನವನ್ನು ಹೊಂದಿರುವ ರಾಷ್ಟ್ರವಾಗಿದೆ. ನಿರ್ಲಕ್ಷ್ಯದ ಚಾಲನೆ ಮತ್ತು ಕೆಟ್ಟ ರಸ್ತೆ ಅಪಘಾತಕ್ಕೆ ಕಾರಣವಾಗಿರಬಹುದೆಂದು ಸದ್ಯ ಅಂದಾಜಿಸಲಾಗಿದೆ. ಅಪಘಾತ ಸಂಭವಿಸುವುದರಲ್ಲಿ ಜಗತ್ತಿನಲ್ಲೇ ಈಜಿಪ್ಟ್‌ಗೆ ಹತ್ತನೆ ಸ್ಥಾನವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News