×
Ad

ಜೇಟ್ಲಿ ವಿರುದ್ಧದ ಕೇಜ್ರಿವಾಲ್ ಆಪಾದನೆ ಅವಮಾನಕಾರಿ, ಪ್ರಚೋದನಕಾರಿ, ಅಪಹಾಸ್ಯಕರ : ದೆಹಲಿ ಹೈಕೋರ್ಟ್

Update: 2016-03-10 12:35 IST

ನವದೆಹಲಿ : ವಿತ್ತ ಸಚಿವ ಅರುಣ್ ಜೇಟ್ಲಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಬುಧವಾರ ನಡೆಸಿದ ದೆಹಲಿ ಹೈಕೋರ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರ ಐವರು ಎಎಪಿ ನಾಯಕರುಗಳಿಗೆ ಸಮನ್ಸ್ ಜಾರಿ ಮಾಡಿದ್ದುಜೇಟ್ಲಿ ವಿರುದ್ಧ ಅವರು ಮಾಡಿದ ಆಪಾದನೆಗಳನ್ನು ‘ಅವಮಾನಕಾರಿ ಮಾತ್ರವಲ್ಲ, ಪ್ರಚೋದನಾತ್ಮಕ ಹಾಗೂ ಅಪಹಾಸ್ಯ ಮಾಡುವಂತಹದ್ದು,’ ಎಂದು ಬಣ್ಣಿಸಿದೆ.

ಎಪ್ರಿಲ್ 7ರಂದು ಕೇಜ್ರಿವಾಲ್, ಅಶುತೋಷ್, ಸಂಜಯ್ ಸಿಂಗ್, ಕುಮಾರ್ ವಿಶ್ವಾಸ್, ರಾಘವ್ ಛಡ್ಡಾ ಹಾಗೂ ದೀಪಕ್ ಬಾಜಪೇಯಿಯವರನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹೇಳಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ಸುಮಿತ್ ದಾಸ್ಸ್ ‘‘ವಾಕ್‌ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ(ಎಬ್ಸೊಲ್ಯೂಟ್) ಹಕ್ಕಲ್ಲವಾಗಿದ್ದು, ಅದಕ್ಕೆ ಕೆಲವೊಂದುನಿಯಂತ್ರಣಗಳಿವೆ,’’ಎಂದು ಹೇಳಿದರು.

ತಮ್ಮ ವಿರುದ್ಧ ಅವಮಾನಕರ ಹೇಳಿಕೆಗಳನ್ನುನೀಡಿದ್ದಾರೆ ಹಾಗೂ ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಎಸೋಸಿಯೇಶನ್‌ನಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ವಿಚಾರದಲ್ಲಿ ತಮ್ಮನ್ನು ಗುರಿಯಾಗಿಸಲಾಗಿದೆಯೆಂದು ಜೇಟ್ಲಿ ಕೋರ್ಟಿಗೆ ದೂರು ಸಲ್ಲಿಸಿದ್ದರು.

ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಜೇಟ್ಲಿಯವರ ವಕೀಲ ಮನೋಜ್ ತನೇಜಾ ‘‘ನಾವು ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಕಾನೂನು ತನ್ನ ಹಾದಿಯಲ್ಲಿ ಮುನ್ನಡೆಯುವುದು,’’ಎಂದು ಹೇಳಿದ್ದಾರೆ.

ಆಪಾದಿತರು ಮಾಡಿದ ಹೇಳಿಕೆಗಳಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯ ಅವರೆಲ್ಲರೂ ಒಟ್ಟಾಗಿ ಈನಿಟ್ಟಿನಲ್ಲಿ ಕಾರ್ಯಾಚರಿಸಿದ್ದಾರೆಂದು ತಿಳಿಯುತ್ತದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News