×
Ad

ಕುಡಿಯುವ ನೀರು ಕೊರತೆ ಆಗದಂತೆ ನೋಡಿಕೊಳ್ಳಿ : ಶಾಸಕ ಹೆಬ್ಬಾರ

Update: 2016-03-10 14:30 IST

ಮುಂಡಗೋಡ, ಮಾ.10:  ಶಾಸಕ ಎಸ್.ಎಮ್.ಹೆಬ್ಬಾರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾ.ಪಂ ಸಭಾಭವನದಲ್ಲಿ ಕೆಡಿಪಿ ತ್ರೈಮಾಸಿಕ ಸಭೆ ನಡೆಯಿತು. ತ್ರೈಮಾಸಿಕ ಸಭೆಯ ಹೆಚ್ಚಿನ ಸಮಯವನ್ನು ಕುಡಿಯುವ ನೀರಿನ ಅಭಾವದ ನಿವಾರಣೆ ಕುರಿತು ಶಾಸಕರು ಸಂಬಂದ ಪಟ್ಟ ಇಲಾಖೆಯಿಂದ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು.

ಜನರಿಗೆ ಕುಡಿಯುವ ನೀರಿನ ಅಭಾವ ತಲೆದೋರಬಾರದು ಗ್ರಾಮಾಂತರ ನೀರಿನ ಕಾಮಗಾರಿ ಕೈಗೊಳ್ಳಬೇಕಾದರೆ ಆಯಾ ಗ್ರಾಮ ಪಂಚಾಯತ್ ಪಿಡಿಒ, ಗ್ರಾ.ಪಂ ಅಧ್ಯಕ್ಷ ಹಾಗು ಆ ಭಾಗದ ಜಿ.ಪಂ ಟಿ.ಪಿ.ಹಾಗು ಗ್ರಾ.ಪಂ ಸದಸ್ಯರ ಗಮನಕ್ಕೆ ತರಬೇಕು ಎಂದರು

ಆರೋಗ್ಯಾಧಿಕಾರಿ ತಮ್ಮ ವರದಿ ಒಪ್ಪಿಸುತ್ತಾ ತಾಲೂಕಿನಲ್ಲಿ ಸಂಕ್ರಾಮಿಕ ರೋಗಗಳು ಹತೋಟಿಯಲ್ಲಿವೆ. ಪಟ್ಟಣ ಹಾಗು ಗ್ರಾಮಾಂತರ ಪ್ರದೇಶಗಳ ನೀರಿನ ಮಾದರಿಯನ್ನು ಪರಿಕ್ಷೇಗೆ ಒಳಪಡಿಸಿ ವರದಿ ನೀಡುವಂತೆ ಮೇಲಾಧಿಕಾರಿಗಳಿಂದ ಸೂಚನೆ ಬಂದಿದೆ. ಹೋಟೆಲ್ ಗಳಲ್ಲಿ ಕುಡಿಯಲು ಬಿಸಿ ನೀರು ಪೂರೈಸಬೇಕು ಎಂದರು.

ಹಾವು ಕಡಿತಕ್ಕೆ ಔಷಧಿ ಆಸ್ಪತ್ರೆಯಲ್ಲಿ ಲಭ್ಯವಿದೆ ಹಾಗು ನಾಯಿ ಕಡಿತ ಪ್ರಕರಣಗಳು ಜಾಸ್ತಿಯಾಗುತ್ತಿರುವುದರಿಂದ ಕೆಲವೊಂದು ಸಮಯದಲ್ಲಿ ಕೊರತೆ ಯಾಗುತ್ತದೆ ಆಸ್ಪತ್ರೆಯಲ್ಲಿ ಬಿ.ಪಿ, ಮಾನಸಿಕ ಕಾಯಿಲೆ ಹಾಗು ಹೃದಯ ಸಂಬಂಧಿ ಕಾಯಿಲೆಯ ಔಷಧಿ ಕೊರತೆ ಇರುವುದರಿಂದ ಆರೋಗ್ಯ ಸಮಿತಿಯಿಂದ ಖರೀದಿಸಲು ಮೇಲಾಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದರು.

ತಹಶೀಲ್ದಾರ ಅಶೋಕ ಗುರಾಣಿ, ತಾಪಂ ಕಾರ್ಯನಿರ್ವಣಾಧಿಕಾರಿ ಭೈರವಾಡಗಿ ಹಾಗು ಸಬ್ ಡಿಎಫ್‌ಒ ರಮೇಶ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News