ಪ್ರತ್ಯೇಕತಾವಾದಿ ನಾಯಕ ಅಲಿಶಾಗೀಲಾನಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

Update: 2016-03-10 10:45 GMT

ಜಮ್ಮು ಕಾಶ್ಮೀರ, ಮಾರ್ಚ್.10: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಹಾಗೂ ಹುರ್ರಿಯತ್ ಕಾನ್ಪ್ರೆನ್ಸ್ ಅಧ್ಯಕ್ಷ ಸೈಯದ್ ಅಲಿ ಶಾ ಗಿಲಾನಿಯವರಿಗೆ ಇಂದು ಬೆಳಗ್ಗೆ ದಿಲ್ಲಿಯ ಮನೆಯಲ್ಲಿ ಹೃದಯಾಘಾತವಾಗಿದೆ. ಅವರನ್ನು ದಿಲ್ಲಿಯ ಸಾಕೇತದ ಮೈಕ್ಸ್ ಆಸ್ಪತ್ರೆಗೆ ತಕ್ಷಣ ಸೇರಿಸಲಾಗಿದೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಸದ್ಯ ಅವರು ಐಸಿಯುನಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಗಿಲಾನಿ ಕುಟುಂಬ ಮೂಲಗಳ ಪ್ರಕಾರ ಕೆಲವು ದಿನಗಳಿಂದ ಅವರು ಅನಾರೋಗ್ಯಗೊಂಡಿದ್ದರು. ಇಂದು ಬೆಳಗ್ಗೆ ಎಂದಿನಂತೆ ಆರೋಗ್ಯ ತಪಾಸಣೆಗೆ ಎಕ್ಸ್‌ಫರ್ಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಅವರನ್ನು ಮಾಲವೀಯ ನಗರದ ಮನೆಗೆ ಕರೆತರಲಾಗಿತ್ತು. ಈ ನಡುವೆ ಹಠಾತ್ ಅವರಿಗೆ ಹ್ರದಯಾಘಾತವಾಗಿದೆ. ದಿಲ್ಲಿಯಲ್ಲಿ ಅವರ ಜೊತೆವಾಸಿಸುವ ಅವರ ಮಗಳು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿಂದ ಅವರನ್ನು ಐಸಿಯುಗೆ ಸ್ಥಾನಾಂತರಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News