×
Ad

’ಕಾಶ್ಮೀರಿ ಯುವತಿಯರನ್ನು ಸೇನೆ ಅತ್ಯಾಚಾರಕ್ಕೆ ಗುರಿಪಡಿಸುತ್ತಿದೆ’: ಕನ್ಹಯ್ಯಾ ಕುಮಾರ್‌

Update: 2016-03-10 16:45 IST

ಹೊಸದಿಲ್ಲಿ, ಮಾರ್ಚ್.10: ದೇಶದ್ರೋಹ ಆರೋಪದಲ್ಲಿ ಬಂಧನಕ್ಕೊಳಗಾಗಿಬಿಡುಗಡೆಯಾದ ನಂತರ ಜೆಎನ್ ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಮತ್ತೆ ವಿವಾದದಲ್ಲಿ. ಕಾಶ್ಮೀರದಲ್ಲಿ ಸೇನೆ ಯುವತಿಯರನ್ನು ಅತ್ಯಾಚಾರಗೈಯುತ್ತಿದೆ ಎಂದು ಭಾಷಣಮಾಡಿದ್ದಾರೆ ಎಂದು ಬಿಜೆಪಿಯ ಯುವ ಮೋರ್ಚಾ ಕನ್ಹಯ್ಯಾರ ವಿರುದ್ಧ ದೂರು ನೀಡಿದೆ. ಕನ್ಹಯ್ಯಾ ಪ್ರಸ್ತಾವನೆಯ ವಿರುದ್ಧ ದೇಶದ್ರೋಹ ಎಂದು ಹೇಳಿ ಯುವಮೋರ್ಚಾ ರಂಗ ಪ್ರವೇಶಿಸಿದೆ. ಜೆಎನ್‌ಯುನಲ್ಲಿ ನಡೆದ ಮಹಿಳಾ ಕಾರ್ಯಕ್ರಮದಲ್ಲಿ ಸೈನಿಕರೊಂದಿಗೆ ಅತೀವ ಗೌರವಿದೆ.ಹಾಗಿದ್ದರೂ ಕಾಶ್ಮೀರದಲ್ಲಿ ಭಾರತೀಯ ಸೇನೆ ಯುವತಿಯರ ಬಲಾತ್ಕಾರ ನಡೆಸುತ್ತಿದೆ ಎಂದು ಕನ್ಹಯ್ಯಾ ಹೇಳಿದ್ದಾರೆನ್ನಲಾಗಿದೆ. ಇದರ ವಿರುದ್ಧ ಬಿಜೆಪಿ ಯುವ ವಿಭಾಗ ದೂರು ನೀಡಿದೆ.

 ಕಾಶ್ಮೀರದಲ್ಲಿ ಸೇನೆಗೆ ವಿಶೇಷಾಧಿಕಾರ ನೀಡುವ ಆಫ್ಸಾಫ ಕಾನೂನಿನ ವಿರುದ್ಧ ಕನ್ಹಯ್ಯಾ ತೀಕ್ಷ್ಣ ಟೀಕಾ ಪ್ರಹಾರ ನಡೆಸಿದ್ದರು. ಆದರೆ ದೇಶ ವಿರೋಧಿ ಪ್ರಸ್ತಾವನೆಗಳನ್ನು ನೀಡಬಾರದೆಂಬ ಕನ್ಹಯ್ಯಾರ ಜಾಮೀನು ನಿಯಮಕ್ಕೆ ಇದು ವಿರುದ್ಧವಾಗಿದೆ ಎಂದು ಯುವ ಮೋರ್ಚಾ ವಾದಿಸುತ್ತಿದೆ. ನೀವು ಎಷ್ಟು ತಡೆಯಲು ಶ್ರಮಿಸುವಿರೋ ಅಷ್ಟೇ ತೀವ್ರವಾಗಿ ಮಾನವ ಹಕ್ಕು ಉಲ್ಲಂಘನೆಯ ವಿರುದ್ಧ ನಾವು ಧ್ವನಿಯೆತ್ತುತ್ತೇವೆ. ಆಫ್ಸಾಫ ವಿರುದ್ಧ ಧ್ವನಿಯೆತ್ತುವ ನಾವು ನಿಕರೊಂದಿಗೆ ಅತ್ಯಂತ ಗೌರವ ತೋರಿಸುವವರೇ ಆಗಿದ್ದೇವೆ. ಭದ್ರತಾ ಅಧಿಕಾರಿಗಳು ಕಾಶ್ಮೀರಿ ಯುವತಿಯರನ್ನು ಚಿಂದಿಚೂರು ಮಾಡುವ ಕಾಶ್ಮೀರಿ ಮಹಿಳೆಯರ ವಿಷಯವನ್ನೂ ಹೇಳುವೆನೆಂದು ಗುರುವಾರ ರಾತ್ರಿಯಲ್ಲಿ ನಡೆದ ಮಹಿಳಾದಿನಾಚರಣೆ ರ್ಯಾಲಿಯಲ್ಲಿ ಭಾಗವಹಿಸಿ ಕನ್ಹಯ್ಯಾ ಹೇಳಿದ್ದಾರೆ.

ಯುದ್ಧದ ವೇಳೆ ವಾಂಡಿಯಲ್ಲಿ ಸಾವಿರ ಮಹಿಳೆಯರು ಅತ್ಯಾಚಾರಕ್ಕೊಳಗಾದರು. ಆಫ್ರಿಕದಲ್ಲಿ ಜನಾಂಗೀಯ ಗಲಭೆ ವೇಳೆ ವಿರೋಧಿಗಳನ್ನು ಆಕ್ರಮಿಸಿ ಅವರ ಮಹಿಳೆಯರನ್ನು ಅತ್ಯಾಚಾರಗೈದಿದೆ. ಗುಜರಾತ್ ಒಂದು ಉದಾಹರಣೆಯಾಗಬಹುದು. ಗಲಭೆ ವೇಳೆ ಅಲ್ಲಿ ಮಹಿಳೆಯರು ಕೊಲ್ಲಲ್ಪಟ್ಟಿದ್ದು ಮಾತ್ರವಲ್ಲ ಅದಕ್ಕಿಂತ ಮೊದಲು ಅವರನ್ನು ಕ್ರೂರವಾಗಿ ಅತ್ಯಾಚಾರಗೈಯ್ಯಲಾಗಿತ್ತು ಎಂದು ಕನ್ಹಯ್ಯಾ ಹೇಳಿದ್ದರು.

ಕನ್ಹಯ್ಯಾ ರೊಂದಿಗೆ ಫೆಬ್ರವರಿ ಒಂಬತ್ತಕ್ಕೆ ನೀಡಲಾದ ಹೇಳಿಕೆಗೆ ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್ ವಿರುದ್ಧವೂ ದೂರು ನೀಡಲಾಗಿದೆ. ಕಾಶ್ಮೀರ ಭಾರತದ ಭಾಗವಲ್ಲವೆಂದೂ ಅನಧಿಕೃತವಾಗಿ ವಶದಲ್ಲಿರಿಸಲಾಗಿದೆಯೆಂದೂ ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದು ನಿವೇದಿತಾ ಮೆನನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News