×
Ad

ಕಾಸರಗೋಡು:ಎಡನೀರು ಪಾಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದ ಮಾರಕಾಸ್ತ್ರಗಳು ಮತ್ತು ಬೈಕ್ ಪೊಲೀಸರ ವಶ,

Update: 2016-03-10 17:20 IST

ಕಾಸರಗೋಡು: ಎಡನೀರು  ಪಾಡಿ ಯಲ್ಲಿ   ಅನುಮಾನಾಸ್ಪದ  ರೀತಿಯಲ್ಲಿ ಕಂಡು ಬಂದ  ಮಾರಕಾಸ್ತ್ರಗಳನ್ನು ಮತ್ತು ಒಂದು  ಬೈಕನ್ನು  ವಿದ್ಯಾನಗರ  ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಈ ಪ್ರದೇಶದಲ್ಲಿ  ಎರಡು ತಂಡಗಳ ನಡುವೆ ಘರ್ಷಣೆ ನಡೆದಿತ್ತು . ಈ ಹಿನ್ನಲೆಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ರಸ್ತೆ ಬದಿಯ ಚರಂಡಿ ಯಲ್ಲಿ   ಬಚ್ಚಿಟ್ಟ ಸ್ಥಿತಿಯಲ್ಲಿ ಮಾರಕಾಸ್ತ್ರ ಪತ್ತೆಯಾಗಿದ್ದು , ಅಲ್ಪ ದೂರ  ಬುಲೆಟ್ ಬೈಕ್ ಕೂಡಾ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ದರೋಡೆ ಅಥವಾ ಇನ್ಯಾವುದೇ ಕೃತ್ಯ  ನಡೆಸಲು  ಮಾರಕಾಸ್ತ್ರವನ್ನು ತಂದು ಬಳಿಕ ತೊರೆದು ಪರಾರಿಯಾಗಿರಬಹುದೇ ಎಂಬ ಸಂಶಯ ಉಂಟಾಗಿದೆ .
ಬೈಕ್‌ನ ನಂಬ್ರ   ಕೇಂದ್ರೀಕರಿಸಿ ಪೊಲೀಸರು ನಡೆಸುತ್ತಿದ್ದಾರೆ. ಇದೇ ವೇಳೆ ಬೈಕ್‌ನ ನಂಬ್ರ ಅಸಲಿ ಯಾ ನಕಲಿಯಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗು ತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News