ಸಮಯಪ್ರಜ್ಞೆಯಿಂದ ಬದುಕಿ, ಹಂತಕನನ್ನೂ ಜೈಲಿಗೆ ಕಳಿಸಿದ ಆರ್ಕಿಟೆಕ್ಟ್
Update: 2016-03-10 17:24 IST
ಹೊಸದಿಲ್ಲಿ , ಮಾ. ೧೦: ನೋಯ್ಡಾದ ಸೆಕ್ಟರ್ 15 ರಲ್ಲಿ ಗುರುವಾರ ಹಾಡಹಗಲೇ ಆರ್ಕಿಟೆಕ್ಟ್ ಒಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಆ ಅಪಾಯಕಾರಿ ಸಮಯದಲ್ಲೂ ಸಮಯ ಪ್ರಜ್ಞೆ ತೋರಿದ ಆರ್ಕಿಟೆಕ್ಟ್ ರಾಕೇಶ್ ಅವಸ್ಥಿ ಜೀವ ಉಳಿಸಿಕೊಂಡಿದ್ದು ಮಾತ್ರವಲ್ಲದೆ ಒಬ್ಬ ದುಷ್ಕರ್ಮಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಯಾದೊಡನೆ ಅವಸ್ಥಿ ತಮ್ಮ ಕಾರನ್ನು ದುಷ್ಕರ್ಮಿಗಳಿದ್ದ ಬೈಕ್ ಗೆ ಡಿಕ್ಕಿ ಹೊಡೆದರು. ಆಗ ಅವರಲ್ಲೊಬ್ಬ ಬೈಕಿನಿಂದ ಕೆಳಗೆ ಬಿದ್ದ. ಆಗ ಸಾರ್ವಜನಿಕರು ಆತನನ್ನು ಹಿಡಿದರು.
" ಅವಸ್ಥಿಯ ಮೇಲೆ ಗುಂಡಿನ ದಾಳಿ ನಡೆಯಿತು. ಕೂಡಲೇ ಪೊಲೀಸರು ಅವರನ್ನು ಕೈಲಾಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸಾರ್ವಜನಿಕರು ದಾಳಿಕೋರರಲ್ಲಿ ಒಬ್ಬನನ್ನು ಹಿಡಿದು ಕೊಟ್ಟಿದ್ದಾರೆ. ಆತನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದ hindustantimes ಚಿತ್ರಗಳನ್ನು ಪ್ರಕಟಿಸಿದೆ.