ಕಡಬ ಮೆಸ್ಕಾಂ ಉಪ ವಿಭಾಗದಿಂದ ಸುಳ್ಯ ತಾಲೂಕಿಗೆ ವಿದ್ಯುತ್ ಪೂರೈಕೆ - ಕಡಬದಲ್ಲಿ ವಿದ್ಯುತ್ ಸಮಸ್ಯೆ
ಕಡಬ, ಮಾ 10. ಇಲ್ಲಿನ ಮೆಸ್ಕಾಂ ಉಪ ವಿಭಾಗದಿಂದ ಸುಳ್ಯ ತಾಲೂಕಿನ ವಿವಿಧ ಭಾಗಗಳಿಗೆ ವಿದ್ಯುತ್ ಸರಬರಾಜಾಗುತ್ತಿದ್ದು ಇದರಿಂದ ಕಡಬ ಮೆಸ್ಕಾಂ ಉಪ ವಿಭಾಗದಲ್ಲಿ ತೀವ್ರ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಈಗಾಗಲೇ ಮೂರಾಜೆ ಮೂಲಕ ಎಡಮಂಗಲಕ್ಕೆ ಹೊಸ ವಿದ್ಯುತ್ ಸಂಪರ್ಕವನ್ನು ಮಾಡಲಾಗುತ್ತಿದ್ದು ಇದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್‌ರವರ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಘಟನೆ ಗುರುವಾರದಂದು ನಡೆದಿದೆ. ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ನೇತೃತ್ವದಲ್ಲಿ ಹಲವಾರು ಮಂದಿ ವಿದ್ಯುತ್ ಬಳಕೆದಾರರು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬಳಿಕ ಮೆಸ್ಕಾಂ ಎ.ಇ.ಇ ಸುರೇಶ್ ಕುಮಾರ್‌ರವರ ಜತೆ ಜಿ.ಪಂ. ಪಿ,ಪಿ ವರ್ಗೀಸ್ ಮಾತುಕತೆ ನಡೆಸಿ, ಕಡಬ ಮೆಸ್ಕಾಂ ಉಪ ವಿಭಾಗದಿಂದ ವಿದ್ಯುತ್‌ನ್ನು ಸುಳ್ಯ ತಾಲೂಕಿನ ವಿವಿಧೆಡೆ ಸರಬರಾಜು ಮಾಡುತ್ತಿರುವುದರಿಂದ ಕಡಬ ಭಾಗದಲ್ಲಿ ಸಮಸ್ಯೆ ಉಂಟಾಗುತ್ತಿದೆ, ಇದನ್ನು ಕೂಡಲೇ ನಿಲ್ಲಿಸಬೇಕು. ಅಲ್ಲದೆ ಮೂರಾಜೆ ಮೂಲಕ ಎಡಮಂಗಲ ಭಾಗಕ್ಕೆ ಹೊಸ ವಿದ್ಯುತ್ ಲೈನ್ ಮಾಡಲಾಗುತ್ತಿದ್ದು ಇದರಿಂದ ಕಡಬ ಭಾಗಕ್ಕೆ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಎ.ಇ.ಇ. ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಡಬ ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್ ರೈ, ಪ್ರಮುಖರಾದ ರಾಯ್ ಅಬ್ರಹಾಂ, ಕೃಷ್ಣಪ್ರಸಾದ್ ಭಟ್ ಎಡಪತ್ಯ, ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಪೂಜಾರಿ, ಡೇನಿಸ್ ಫೆರ್ನಾಂಡಿಸ್, ಸೋಮಪ್ಪ ಪಟ್ನ, ಲತೇಶ್, ಮೋಹನ್, ಚಾಕೋ ಪಟ್ನ, ರಾಧಾಕೃಷ್ಣ ಪಟ್ನ, ಬಾಲಕೃಷ್ಣ ಪಟ್ನ, ಹರೀಶ್ ಕುದ್ರಡ್ಕ, ಮೋಹನ್ ದಾಸ್, ನಾರಾಯಣ, ಯಶೋಧರ, ಕೃಷ್ಣಪ್ಪ, ರಂಜೀತ್, ಉಮೇಶ್, ದುರ್ಗಾಪ್ರಸಾದ್ ಮೊದಲಾದವರು ಪಾಲ್ಗೊಂಡಿದ್ದರು.