×
Ad

ಕಡಬ: ಪ್ರಥಮದರ್ಜೆ ಕಾಲೇಜಿಗೆ 5 ಎಕ್ರೆ ಸ್ಥಳ ಮಂಜೂರು-ಸರ್ವೆ ಕಾರ್ಯ

Update: 2016-03-10 18:40 IST

ಕಡಬ, ಮಾ 10. ಇಲ್ಲಿಗೆ ಪ್ರಥಮ ದರ್ಜೆ ಕಾಲೇಜಿಗೆ ಸರಕಾರ 5 ಎಕ್ರೆ ಸ್ಥಳ ಮಂಜೂರು ಮಾಡಿದ್ದು ಈ ಹಿನ್ನಲೆಯಲ್ಲಿ ಮಾ.10 ಕಡಬ ಸರ್ವೆ ಅಧಿಕಾರಿಗಳಿಂದ ಸರ್ವೆ ಕಾರ್ಯ ನಡೆಯಿತು.

 ಕಡಬ ಸರಕಾರಿ ಪ್ರೌಢಶಾಲೆಯ 14.5 ಎಕ್ರೆ ಜಾಗದಲ್ಲಿ 5 ಎಕ್ರೆಯನ್ನು ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಜಿಲ್ಲಾಧಿಕಾರಿಯವರು ಖಾದಿರಿಸಿ ಈ ಬಗ್ಗೆ ಸಹಾಯಕ ಕಮೀಷನರ್‌ಗೆ ಆದೇಶ ನೀಡಿದ್ದರು. ಈ ಬಗ್ಗೆ ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ರವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಂತೆ ಜಾಗ ಖಾದಿರಿಸುವಲ್ಲಿ ಯಶಸ್ವಿಯಾಗಿದ್ದರೆ. ಈ ಸಂದರ್ಭದಲ್ಲಿ ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಪೂಜಾರಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕಡಬ ಪ್ರಥಮ ದರ್ಜೆ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ರೈ ಕರ್ಮಾಯಿ, ಪ್ರಮುಖರಾದ ಎಸ್. ಅಬ್ದುಲ್ ಖಾದರ್, ಜನಾರ್ಧನ ಗೌಡ ಪಣೆಮಜಲು, ಕುರಿಯನ್ ವಿ.ಎ, ಸರ್ವೆಯರ್ ನವೀನ್, ಶಾಲಾ ಉಪನ್ಯಾಸಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News