ಭಟ್ಕಳ: ಗೊಂಡ ಸಮುದಾಯ ನಮ್ಮ ಜನಪದ ಕಲೆ ಸಂಸ್ಕ್ರತಿಯ ಹರಿಕಾರ - ಶಾಸಕ ಮಂಕಾಳು ವೈಧ್ಯ
ಭಟ್ಕಳ:ಬುಡಕಟ್ಟು ಜನಾಂಗದವರಲ್ಲಿ ರಗ್ತಗತವಾಗಿ ಬಂದಿರುವ ಶಿವರಾತ್ರಿ ಕುಣಿತ ದಂತಗಂಡು ಮೆಟ್ಟಿನ ಕಲೆಯನ್ನು ಉಳಿಸಿಕೊಂಡು ಬಂದಿರುವ ಗೊಂಡ ಸಮುದಾಯ ನಮ್ಮಜನಪದ ಕಲೆ ಸಂಸ್ಕ್ರತಿಯ ಹರಿಕಾರರೆಂದು ಭಟ್ಕಳ ಶಾಸಕ ಮಂಕಾಳು ವೈಧ್ಯರವರುಅಭಿಪ್ರಾಯ ಪಟ್ಟರು.
ಅವರು ಶಿವರಾತ್ರಿಯಂದು ಹಾಡವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಓಣಿಬಾಗಿಲುತಮ್ಮಣ್ಣಗೊಂಡರ ಮನೆ ಆವರಣದಲ್ಲಿ ಶಿವರಾತ್ರಿ ಕುಣಿತದಆರಂಭದಕಾರ್ಯ
ಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು. ಇಲ್ಲಿಯಜನರದೈನಂದಿನ ಕಾರ್ಯಕ್ರಮಗಳುಸಮುದಾಯದ ಕಲೆ, ಸಾಂಸ್ಕ್ರತಿಕಕ್ರೀಡೆ ಮತ್ತು ಸಾಮಾಜಿಕ ಕಾರ್ಯಕಗಳಿಗೆ ಉತ್ತೇಜನ ನೀಡುವಉದ್ದೇಶಕ್ಕಾಗಿ ಸಮೂದಾಯಭವನವನ್ನು ಮಂಜೂರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡುಶುಭಕೋರಿ ಮಾತನಾಡಿದ ಹಾಡವಳ್ಳಿ ಗ್ರಾಮ ಪಂಚಾಯತಅಧ್ಯಕ್ಷರಾದ ಶ್ರೀ ಶ್ರೀಧರ ಮಂಜು ಶೆಟ್ಟಿಯವರು ಮಾತನಾಡಿಓಣಿಬಾಗಿಲುಗ್ರಾಮದಲ್ಲಿ ಕಳೆದ 34 ವರ್ಷಗಳಿಂದ ನಿರಂತರವಾಗಿ ಉಳಿಸಿಕೊಂಡು ಬಂದ ಈ ಗೊಂಡ ಸಮುದಾಯವನ್ನು ಅಭಿನಂದಿಸಿದ ಅವರು ಮುಂದಿನ ಪೀಳಿಗೆಗಾಗಿ ಈ ಕಲೆಯನ್ನು ಉಳಿಸಬೇಕಾದ ಅಗತ್ಯವಿದೆ, ನವಜನಾಂಗಕ್ಕೆ ಈ ಕಲೆಯ ಬಗ್ಗೆ, ಸಮಗ್ರ ಮಾಹಿತಿ ನೀಡಿ ಉಳಿಸಿಕೊಳ್ಳಬೇಕು ಎಂದುಕರೆ ನೀಡಿದರು. ಗ್ರಾಮ ಪಂಚಾಯತವತಿಯಿಂದ ಸ್ವಚ್ಚ ಭಾರತ್ ಮಿಶನ್‌ಯೋಜನೆಯಡಿಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಬೇಕಲ್ಲದೆ ವಸತಿ, ನರೇಗಾ, ಯೋಜನೆಯ ಸಂಪೂರ್ಣ ಲಾಭ ಪಡೆಯಲುಕರೆ ನೀಡಿದರು.
ಶಾಸಕರೊಂದಿಗೆಜಿ.ಪಂ. ಸದಸ್ಯರಾದಅಲ್ಬರ್ಟಡಿಕೋಸ್ತಾ, ಗ್ರಾಮ ಪಂಚಾಯತಉಪಾಧ್ಯಕ್ಷೆ ಶ್ರೀಮತಿ ನಾಗವೇಣಿ ಸುಕ್ರಗೊಂಡ, ಗ್ರಾ.ಪಂ. ಮಾಜಿಅಧ್ಯಕ್ಷರಾದ ಶ್ರೀ ಎಂ.ಪಿ. ಶೈಲೇಂದ್ರಗೌಡ, ಗಣ್ಯರಾದ ಶ್ರೀ ಸುಬ್ರಮಣ್ಯ ಶೆಟ್ಟಿ, ಊರಗಣ್ಯರಾದತಮ್ಮಣ್ಣಗೊಂಡ, ಮಾಜಿಜಿ.ಪಂ. ಸದ್ಯರಾದ ಶ್ರೀಮತಿ ಮಂಜಮ್ಮಗೊಂಡ ಹಾಗೂ ಭಾಗದ ಪ್ರಮುಖರು ಹಾಜರಿದ್ದರು
ಇದೆ ಸಂದರ್ಭದಲ್ಲಿ ಶಾಸಕರು ಹಾಗೂ ತದನಂತರ ಬುಧವಾರ ಬೆಳಗಿನಜಾವ ಈ ಸುಗಿ ಕುಣಿತಕಾರ್ಯಕ್ರಮ ಸಮಾಪನಗೊಂಡಿತು.