ಕೊಣಾಜೆ: ಪಿ.ಎ. ಕಾಲೇಜಿನಲ್ಲಿ ಇ-ನ್ಯೂಸ್ ಲೆಟರ್ ಬಿಡುಗಡೆ ಕಾರ್ಯಕ್ರಮ
Update: 2016-03-10 18:58 IST
ಕೊಣಾಜೆ: ಇಲ್ಲಿಗೆ ಸಮೀಪದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿ ಪೇಸ್ ಪ್ರೆಸ್ ಸೆಮಿಸ್ಟರ್ ಇ-ನ್ಯೂಸ್ ಲೆಟರ್‌ನ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ ನಿಯತಕಾಲಿಕೆಯನ್ನು ಬಿಡುಗಡೆ ಮಾಡಿದರು. ಪ್ರಾಂಶುಪಾಲರಾದ ಡಾ ಅಬ್ದುಲ್ ಷರೀಫ್, ಉಪಪ್ರಾಂಶುಪಾಲರಾದ ಡಾ ರಮೀರ್ ಎಂ.ಕೆ., ಶೈಕ್ಷಣಿಕ ನಿರ್ದೇಶಕರಾದ ಸರ್ಫರಾಜ್ ಹಾಶಿಂ ಜೆ. ವಿದ್ಯಾರ್ಥಿ ವ್ಯವಹಾರ ನಿರ್ದೇಶಕ ಡಾ ಆಂಟೊನಿ ಎ.ಜೆ. ಹಾಗೂ ವಿಭಾಗದ ಮುಖ್ಯಸ್ಥರುಗಳುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇ-ನ್ಯೂಸ್ ಲೆಟರ್ ರೂಪಿಸಿದ ವಿದ್ಯಾರ್ಥಿಗಳಾದ ರೋಲ್ವಿನ್ ಮೊಂತೆರೊ ಮತ್ತು ಮಿಗ್ದಾದ್ ಹಾಗೂ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಕಾನ್ಫರೆನ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ಮಹಮ್ಮದ್ ಸೆಯಿಲ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.