×
Ad

ಬಿಹಾರ, ಜಾರ್ಖಂಡ್ ಆಗುತ್ತಿರುವ ಭಟ್ಕಳ; ವಿಠಲ್ ನಾಯ್ಕ ಆರೋಪ

Update: 2016-03-10 20:45 IST

ಭಟ್ಕಳ: ಬಿಹಾರ ಹಾಗೂ ಜಾರ್ಖಂಡ ರಾಜ್ಯಗಳಲ್ಲಿ ಪೊಲೀಸ್ ಠಾಣೆಯಲ್ಲಿ ಗೂಂಡಾಗಳು ನುಗ್ಗಿ ಪೊಲೀಸರ ಎದುರೆ ಪೊಲೀಸರು ಸೇರಿದಂತೆ ಇತರರ ಮೇಲೆ ಹಲ್ಲೆ ಮಾಡುತ್ತಾರೆ ಎಂಬ ವರದಿಗಳು ನಾನು ಟಿವಿಗಳಲ್ಲಿ ನೋಡಿದ್ದೇ ಆದರೆ ಈಗ ಭಟ್ಕಳದಲ್ಲೇ ಬಿಜೆಪಿ ಮುಂಖಡರು ಗೂಂಡಾಗಳಂತೆ ಪೊಲೀಸ್ ಠಾಣೆಗೆ ನುಗ್ಗಿ ನನ್ನ ಮಲೆ ಹಲ್ಲೆ ಮಾಡಿದ್ದಲ್ಲದೆ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿಗರಿಂದ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ್ ನಾಯ್ಕ ಆರೋಪಿಸಿದ್ದಾರೆ.

ಬುಧವಾರ ಬಿಜೆಪಿ ಕಾಂಗ್ರೇಸ್ ಮುಖಂಡರ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನನ್ನ ತೇಜೋವಧೆಗಿಳಿದಿರುವ ಬಿಜೆಪಿಯ ಕಾರ್ಯಕರ್ತನನ್ನು ಹಿಡಿದು ವಿಚಾರಿಸಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದು ಈ ಸಂದರ್ಭದಲ್ಲಿ 10-15 ಮಂದಿ ಬಿಜೆಪಿ ಗರು ಏಕಾಎಕಿ ನನ್ನ ಮೆಲೆ ಹಲ್ಲೆ ಮಾಡಿದ್ದಾರೆ. ಅಲ್ಲೇ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೋ ಹಲ್ಲೆಯನ್ನು ಮಾಡಿದ್ದಾರೆ. ಇವರು ರಾಮ ರಾಜ್ಯದ ಮಾತನಾಡುವ ಇವರು ಗಲಭೆ ಅಶಾಂತಿಯನ್ನು ಸೃಷ್ಟಿಸುವ ಕಾರ್ಯಕ್ಕೆ ಕೈ ಹಾಕಿದ್ದು ಇವರ ರಾಮ ರಾಜ್ಯವಲ್ಲ ರಾವಣ ರಾಜ್ಯಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇವರ ಗೂಂಡಾ ವರ್ತನೆಯಿಂದಾಗಿ ಮುಂದಿನ ದಿನಗಳಲ್ಲಿ ಭಟ್ಕಳವನ್ನು ಯಾವ ಹಂತಕ್ಕೆ ತಲುಪುವಂತೆ ಮಾಡುತ್ತಾರೆ ಎನ್ನುವುದು ಸಾಮಾನ್ಯರು ಅರ್ಥಮಾಡಿಕೊಳ್ಳುವಂತಾಗಿದೆ. ಪ್ರಸ್ತುತ ಭಟ್ಕಳದ ಸನ್ನಿವೇಶ ಕಂಡರೆ ಬಹಳ ಬೇಜಾರಾಗುತ್ತಿದೆ. ಬಿಜೆಪಿಗರ ರೌಡಿಸಂ, ಧಾಂದಲೆಗಳನ್ನು ಕಂಡರೆ ಇವರ ಉದ್ದೇಶ ಏನು ಎಂಬುದು ಬಹಿರಂಗವಾಗುತ್ತಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News