ಉಳ್ಳಾಲ: ಬೈಕ್ ಮತ್ತು ನಗದು ಕಳವು, ಆರೋಪಿಗಳ ಬಂಧನ
ಉಳ್ಳಾಲ: ಎರಡು ದಿನಗಳ ಹಿಂದೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಮತ್ತು ಬಟ್ಟೆ ಅಂಗಡಿ ಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಅರೋಪಿಗಳನ್ನು ಉಳ್ಳಾಲ ಪೋಲಿಸರು ಗುರುವಾರ ಬಂಧಿಸಿದ್ದಾರೆ.
ಬಂಧಿತ ಅರೋಪಿಗಳನ್ನು ಮುಕಚೇರಿ ನಿವಾಸಿ ನಿಫಾಸ್ ಅಹ್ಮದ್(21) ಮುಡಿಪು ನಿವಾಸಿ ಉಮರ್ ಫಾರೂಖ್ (26) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮೂರು ದಿನಗಳ ಹಿಂದೆ ಕುತ್ತಾರ್‌ನಲ್ಲಿರುವ ಬಟ್ಟೆ ಅಂಗಡಿಗೆ ಕಳ್ಳರು ನುಗ್ಗಿ ಒಂದು ಸಾವಿರ ನಗದು ಮತ್ತು ಬಟ್ಟೆ ಬರೆಗಳನ್ನು ಕಳವುಗೈಯಲಾಗಿತು. ಈ ಬಗ್ಗೆ ಅಂಗಡಿ ಮಾಲಕರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಇನ್ನೊಂದು ಪ್ರಕರಣದಲ್ಲಿ ಉಳ್ಳಾಲದ ಮನೆ ಬಳಿ ನಿಲ್ಲಿಸಿದ ಬೈಕನ್ನು ಕಳ್ಳರ ತಂಡವೊಂದು ಕಳವುಗೈದಿತ್ತು. ಈ ಬಗ್ಗೆ ಬೈಕ್ ಮಾಲಕರು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಈ ಎರಡು ಪ್ರಕರಣಗಳನ್ನು ದಾಖಲಿಸಿದ ಉಳ್ಳಾಲ ಪೋಲಿಸರು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಗುರುವಾರ ಎರಡು ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ ಉಳ್ಳಾಲ ಪೋಲಿಸರು ಬಂಧಿಸಿದ ಇಬ್ಬರು ಅರೋಪಿಗಳ ಪೈಕಿ ಉಮರ್ ಫಾರೂಕ್ ಎಂಬಾತ ಮನೆ ಕಳ್ಳತನದಲ್ಲಿ ಶಾಮೀಲಾಗಿದ್ದಾನೆ ಎಂದು ಪೋಲಿಸರಿಗೆ ತನಿಖೆಯ ವೇಳೆ ಮಾಹಿತಿ ಲಭಿಸಿದೆ.