ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ: ಎನ್‌ಎಸ್‌ಟಿ ಟ್ರಸ್ಟಿಗೆ ಜಾಮೀನು ರಹಿತ ವಾರಂಟ್
Update: 2016-03-10 21:47 IST
ಬೆಳ್ತಂಗಡಿ, ಮಾ.10: ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್(ಎನ್‌ಎಸ್‌ಟಿ)ನ ಟ್ರಸ್ಟಿ ರಂಜನ್ ರಾವ್ ಯೆರ್ಡೂರು ಅವರ ಬಂಧನಕ್ಕೆ ಜಾಮೀನುರಹಿತ ವಾರಂಟ್ ಜಾರಿ ಮಾಡಿ ಬೆಳ್ತಂಗಡಿಯ ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶಿಸಿದೆ.
ಬೆಳ್ತಂಗಡಿ ಸಮಾಜ ಮಂದಿರ ಪ್ರಕರಣಕ್ಕೆ ಸಂಬಂಧಿಸಿ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಕಾರ್ಯದರ್ಶಿ ರತ್ನವರ್ಮ ಬುಣ್ಣು ವಿರುದ್ಧ ಮಾಧ್ಯಮ ಹಾಗೂ ಅಂತಾರ್ಜಾಲಗಳಲ್ಲಿ ಅಪಪ್ರಚಾರ ನಡೆಸಿದ ಬಗ್ಗೆ ರಂಜನ್ ರಾವ್ ಯೆರ್ಡೂರು ವಿರುದ್ಧ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಲ್ಲಿ ರಂಜನ್ ಎರಡು ಭಾರಿ ವಿಫಲರಾದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದೆ.