×
Ad

ಕಾಸರಗೋಡು : ಅಕ್ರಮ ಮದ್ಯ ತಯಾರಿಕಾ ಘಟಕ ಪತ್ತೆ; ಓರ್ವ ಸೆರೆ

Update: 2016-03-11 11:37 IST

ಕಾಸರಗೋಡು, ಮಾ.11: ಆದೂರು ಮಣಿಯೂರಿನಲ್ಲಿ ಅಕ್ರಮ  ಮದ್ಯ  ತಯಾರಿಕಾ  ಘಟಕ ಪತ್ತೆಯಾಗಿದೆ.

ಇಲ್ಲಿನ ಅಬಕಾರಿ ದಳದ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದೆ. ಸುಮಾರು 700 ಲೀಟರ್  ಹುಳಿರಸ, 100 ಲೀಟರ್  ಸಾರಾಯಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮನೆಯ ಅಡುಗೆ ಕೋಣೆ ಬಳಿ ಘಟಕ ನಿರ್ಮಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಮನೆಯ ಮಾಲಕ ನಾರಾಯಣ ನಾಯಕ್ (40 ) ಎಂಬಾತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಅಬಕಾರಿ ಇಲಾಖೆಗೆ ಲಭಿಸಿದ  ಖಚಿತ ಮಾಹಿತಿಯಂತೆ ದಾಳಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News