×
Ad

ಸೌದಿ : ಮಾಲಕಿ, ಪುತ್ರಿಯನ್ನು ಕೊಚ್ಚಿ ಕೊಂದ ಮನೆಗೆಲಸದಾಕೆ

Update: 2016-03-11 15:47 IST

ರಿಯಾದ್: ಮೊರಕ್ಕೋ ಸಂಜಾತಮನೆಗೆಲಸದ ಮಹಿಳೆಯೊಬ್ಬಳು ತನ್ನ 65 ವರ್ಷದ ಸೌದಿ ಮಾಲಕಿ ಹಾಗೂ ಆಕೆಯ 30ರ ಹರೆಯದ ಪುತ್ರಿಯನ್ನು ಕಸಾಯಿ ಕತ್ತಿಯಿಂದ ಕೊಂದ ಘಟನೆ ಬುಧವಾರ ವರದಿಯಾಗಿದೆ. ಅವರಿಬ್ಬರ ದೇಹಗಳನ್ನು ಕೊಚ್ಚಿ ಚೂರು ಚೂರು ಮಾಡಿದ ನಂತರ ಆಕೆ ಪೊಲೀಸರಿಗೆ ಶರಣಾದಳೆಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಈ ಅಪರಾಧ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಕ್ರಿಮಿನಲ್ ಸೈಕಾಲಜಿ ತಜ್ಞ ಹಾಗೂ ಅಲ್-ಅಮಲ್ ಮಾನಸಿಕ ಆಸ್ಪತ್ರೆಯ ಮಾನಸಿಕಶಾಸ್ತ್ರ ವಿಭಾಗದ ಮುಖ್ಯಸ್ಥ ಅಬ್ದುಲ್ಲಾ ಅಲ್-ವಾಯ್ಲಿಇದೊಂದು ಮಾನಸಿಕ ವಿಕೃತಿಯ ಸಮಸ್ಯೆಯಿಂದ ಉಂಟಾದ ಘಟನೆಯಾಗಿರಬಹುದು ಹಾಗೂ ತನ್ನ ಮಾಲಕಿಯೊಂದಿಗೆ ಆಕೆಯ ಜಗಳಗಳು ಈ ಕೊಲೆಯಲ್ಲಿ ಪರ್ಯವಸಾನವಾಗಿರಬಹುದೆಂದು ಹೇಳಿದ್ದಾರೆ.

ಇದೊಂದು ಪೂರ್ವಯೋಜಿತ ಸೇಡಿನ ದಾಳಿಯಾಗಿದ್ದು ಕೆಲಸದಾಕೆಯ ಮಾನಸಿಕ ಸ್ಥಿತಿಯಿಂದಾಗಿ ಆಕೆಗೆ ತನ್ನ ಕೃತ್ಯದ ಪರಿಣಾಮಗಳ ಬಗ್ಗೆ ಅರಿವಿರಲಿಕ್ಕಿಲ್ಲವೆಂದು ಅವರು ತಿಳಿಸಿದರು.

ಕಿಂಗ್ ಸೌದ್ ವಿಶ್ವವಿದ್ಯಾನಿಲಯದ ಸಾಮಾಜಿಕ ವಿಜ್ಞಾನ ಇಲಾಖೆಯ ಸಲ್ವಾ ಅಲ್-ಖತೀಬ್ ಅವರ ಪ್ರಕಾರ ಮನೆಕೆಲಸದಾಕೆ ಇಂತಹ ಅಪರಾಧಗೈಯ್ಯುವ ಬದಲು ಮನೆಯನ್ನು ತೊರೆದು ತನ್ನ ದೇಶದ ದೂತಾವಾಸ ಕಚೇರಿಯನ್ನು ಸಂಪರ್ಕಿಸಬಹುದಾಗಿತ್ತು, ಎಂದು ಹೇಳಿದರು.

ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದಿರಬೇಕು, ಎಂದು ಹೇಳಿದ ಅವರು ಆಕೆಯ ಮೇಲೆ ಮಾಲಿಕನ ಮನೆಯವರು ಸತತವಾಗಿ ಹಲ್ಲೆ ನಡೆಸಿದ್ದರಿಂದ ಹಾಗೂ ಆಕೆಗೆ ಆಹಾರ ಹಾಗೂ ವೇತನ ನೀಡದೇ ಇರುವುದರಿಂದ ಆಕೆ ಈ ಸೇಡಿನ ಕ್ರಮಕ್ಕೆ ಕೈ ಹಾಕಿರಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News