ಮಾ. 19-21: ಮೂಡುಬಿದಿರೆ ಗುರು ಬಸದಿಯಲ್ಲಿ ವಿಶೇಷ ಮೂರ್ತಿ ಪ್ರತಿಷ್ಠೆ
ಮೂಡುಬಿದಿರೆ : ಇಲ್ಲಿನ ಪಟ್ಟಣದ ಗುರು ಬಸದಿಯಲ್ಲಿ 19ರಿಂದ 21ವರೆಗೆ 3 ದಿನಗಳ ಕಾಲ ನಡೆಯುವ ವಿಶೇಷ ಮೂರ್ತಿ ಪ್ರತಿಷ್ಠೆ ಹಾಗೂ ಪೂಜಾ ಕಾರ್ಯಕ್ರಮ ಜರುಗಲಿದೆ ಎಂದು ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಇಲ್ಲಿನ ಜೈನ ಮಠದಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮಾತಾನಾಡಿದರು.
ಗುರು ಬಸದಿಯಲ್ಲಿ ವಾಸ್ತುವಿನ್ಯಾಸವನ್ನು ಹೊಂದಿದ್ದರಿಂದ, ಆರಂಭದಲ್ಲಿ ಚತುರಸ್ರ ಗರ್ಭಗೃಹ, ಪ್ರದಕ್ಷಿಣಪಥ, ಅರ್ಧಮಂಟಪ ಮಾತ್ರ ಇದ್ದವು. ಆ ಬಳಿಕ ಕ್ರಿ.ಶ 1538ರಲ್ಲಿ ಕಲಾತ್ಮಕ ಸ್ತಂಭಗಳಿಂದ ಕೊಡಿದ ವಿಶಾಲವಾದ ನವರಂ, ಸಭಾಮಂಟಪ, ಮುಖಮಂಟಪಗಳು ರಚನೆಯಾಗಿದವು.ಆರಂಭದಲ್ಲಿದ್ದ ತೆರೆದ ಅರ್ಧ ಮಂಟಪವನ್ನು ಮುಚ್ಚಿ, ಸಭಾಮಂಟಪದಿಂದಲೇ ಪ್ರದಕ್ಷಿಣೆ ಬರುವಂತೆ, ಪ್ರದಕ್ಷಿಣ ಪಧದ ರಚನೆಯಾಯಿತು. ಇದು ಮೂರು ಅಂತಸ್ತುಗಳುಳ್ಳ ಕಟ್ಟಡವಾಗಿದ್ದು, ಮೇಲಿನ ಅಂತಸ್ತುಗಳಲ್ಲಿ ಸ್ವತಮತ್ರ ಗರ್ಭಗುಡಿಗಳಿದ್ದು ಅವುಗಳಲ್ಲೂ ವಿಗ್ರಹಗಳನ್ನಿಟ್ಟಿದ್ದಾರೆ. ಕಟ್ಟಡದ ಮೇಲೆ ಛಾವಣಿಗೆ ತಾಮ್ರದ ತಗಡನ್ನು ಉಪಯೋಗಿಸಲಾಗಿದೆ.
ಇಲ್ಲಿಯ ಸ್ತಂಭಗಳೆಲ್ಲವೂ ತ್ರಿಭುವನ ತಿಲಕ ಚೂಡಾಮಣೆ ಬಸದಿಯ ಸ್ತಂಭಗಳನ್ನು ಹೋಲುತ್ತವೆ. ಸಭಾಮಂಟಪದ ನಾಲ್ಕು ಸ್ತಂಭಗಳ ಮೇಲಿರುವ ಉಬ್ಬುಶಿಲ್ಪಗಳಲ್ಲಿ ಪೂರ್ಣ ಕುಂಭ ಜೈನ ಪುರಾಣದ ಸನ್ನಿವೇಶಗಳು ಆ ಕಾಲದ ಕೆತ್ತನೆಗಳಿರುವುದು ಗಮರ್ನಾಹ ಎಂದು ತಿಳಿಸಿದ ಅವರು ಮಾ.21ರಂದು ಸಾರ್ವಜನಿಕರಿಗೂ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಪಟ್ನ ಶೆಟ್ಟಿ ಸುದೀಶ್ ಕುಮಾರ್, ಮೊಕ್ತೇಸರ ದೀನೇಶ್ ಆನಡ್ಕ, ಸಂಜಯಂತ್ ಕುಮಾರ್ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.