×
Ad

ಮಂಗಳೂರು : ಮಾ.18-26: ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ ನಡಾವಳಿ ಉತ್ಸವ- ಸಮುದಾಯ ಭವನ ಉದ್ಘಾಟನೆ

Update: 2016-03-11 17:35 IST

 ಮಂಗಳೂರು, ಮಾ. 11: ಕೊಡಿಯಾಲ್‌ಬೈಲ್ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಮಾ.18ರಿಂದ 26ರವರೆಗೆ ನಡಾವಳಿ ಉತ್ಸವ ಹಾಗೂ ಭರಣಿ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ನೆರವೇರಲಿದೆ. ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನದ ಉದ್ಘಾಟನೆ ಮಾ.18ರಂದು ಸಂಜೆ 4ಕ್ಕೆ ನಡೆಯಲಿದೆ.

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ನಾರಾಯಣ ಅವರು, 9 ದಿನದ ಜಾತ್ರೆಯಾದ ಭರಣಿ ಮಹೋತ್ಸವ ಮಾ.13ರಂದು ಗೊನೆ ಮುಹೂರ್ತದೊಂದಿಗೆ ಆರಂಭವಾಗಲಿದೆ ಎಂದರು.

ಕುದ್ರೋಳಿ ಕ್ಷೇತ್ರದ ವಿವಿಧ ಸಮಿತಿಯ ನೇತೃತ್ವದಲ್ಲಿ ಶ್ರೀ ಕ್ಷೇತ್ರ ವ್ಯಾಪ್ತಿಯ 13 ಗ್ರಾಮ ಸಂಘಗಳ ಹಾಗೂ ಕೊಡಿಯಾಲ್‌ಬೈಲ್ ್ರೆಂಡ್ಸ್ ಸಹಯೋಗದೊಂದಿಗೆ ಹಸಿರು ಹೊರೆಕಾಣಿಕೆ ಶೋಭಾಯಾತ್ರೆಯು ಮಾ.16ರಂದು ಮಧ್ಯಾಹ್ನ 3 ಗಂಟೆಗೆ ನಗರದ ನೆಹರೂ ಮೈದಾನಿನಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದೆ ಎಂದರು.

 ಕ್ಷೇತ್ರದಲ್ಲಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 850 ಆಸನ ವ್ಯವಸ್ಥೆಯಿರುವ ನೂತನ ಸಮುದಾಯ ಭವನದ ಉದ್ಘಾಟನೆ ಮಾ.18ರಂದು ಸಂಜೆ ನಡೆಯಲಿದೆ. ಕೇರಳ ಶಿವಗಿರಿ ಮಠದ ಸತ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಓಶಿಯನ್ ಪರ್ಲ್ ಅಧ್ಯಕ್ಷ ಜಯರಾಮ ಬನಾನ್ ಉದ್ಘಾಟಿಸಲಿದ್ದಾರೆ. ಕ್ಷೇತ್ರದ ಗೌರವಾಧ್ಯಕ್ಷ ರೋಹಿದಾಸ್ ಬಂಗೇರ ನಾಮಲಕ ಅನಾವರಣ ಮಾಡಲಿದ್ದು, ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News