×
Ad

ಸುಳ್ಯ: ಎರಡು ಪ್ರತ್ಯೇಕ ಬೈಕ್ ಅಪಘಾತ, ಇಬ್ಬರ ದುರ್ಮರಣ

Update: 2016-03-11 17:43 IST

ಸುಳ್ಯ: ಎರಡು ಪ್ರತ್ಯೇಕ ಬೈಕ್ ಸ್ಕಿಡ್ ಪ್ರಕರಣಗಳಲ್ಲಿ ಸುಳ್ಯ ತಾಲೂಕಿನ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಪಂಜ ಸಮೀಪದ ಜಲಕದಹೊಳೆ ಎಂಬಲ್ಲಿ ನಡೆದ ಬೈಕ್ ಅಪಘಾತದಲ್ಲಿ ಪಂಬೆತ್ತಾಡಿಯ ವ್ಯಕ್ತಿ ಮೃತಪಟ್ಟಿದ್ದಾರೆ. ಪಂಬೆತ್ತಾಡಿ ಗ್ರಾಮದ ಬೆಳ್ತ ಎಂಬವರು ತಮ್ಮ ಪುತ್ರ ನಾಗೇಶ ಎಂಬವರೊಂದಿಗೆ ಬೈಕ್ ನಲ್ಲಿ ಬರುತ್ತಿದ್ದಾಗ ಜಲಕದ ಹೊಳೆ ಎಂಬಲ್ಲಿ ಬೈಕ್ ಸ್ಕಿಡ್ ಆಯಿತು. ಪರಿಣಾಮ ಹಿಂಬದಿ ಸವಾರ ಬೆಳ್ತ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಘಟನೆಯಲ್ಲಿ ಬಾಳಿಲ ನಿವಾಸಿ ಅಸುನೀಗಿದ್ದಾರೆ. ಬಾಳಿಲ ನಿವಾಸಿ ಮಹಮ್ಮದ್ ಪಿ. ಇವರು ಮೃತಪಟ್ಟ ವ್ಯಕ್ತಿ. ಇವರಿಗೆ 55 ವರ್ಷ ವಯಸ್ಸಾಗಿತ್ತು. ಇವರು ಈಶ್ವರಮಂಗಲದಲ್ಲಿರುವ ತಮ್ಮ ಅಂಗಡಿಯನ್ನು ರಾತ್ರಿ ಬಂದ್ ಮಾಡಿ ಪೆರ್ಲಂಪಾಡಿ ರಸ್ತೆ ಮೂಲಕ ಬೆಳ್ಳಾರೆಯ ಬಾಳಿಲ ಮನೆಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತಂದು ಬಳಿಕ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News