×
Ad

ಕಾಸರಗೋಡು : ಸುನಾಮಿ ದುರಂತ ಸಂಭವಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಅಣಕು ಪ್ರದರ್ಶನ

Update: 2016-03-11 18:20 IST

ಕಾಸರಗೋಡು : ಸುನಾಮಿ ದುರಂತ ಸಂಭವಿಸುವ ಸಂದರ್ಭದಲ್ಲಿ  ಕೈಗೊಳ್ಳಬೇಕಾದ  ಸುರಕ್ಷತಾ ಕ್ರಮಗಳ ಕುರಿತು ಅಣಕು ಪ್ರದರ್ಶನ ನಡೆಸಿ  ತೋರಿಸಿ ಕೊಡುವ ಮೂಲಕ ದುರಂತ ನಿವಾರಣಾ ಪ್ರಾಧಿಕಾರ ಸಾಕ್ಷಿಯಾಯಿತು.ರಾಷ್ಟ್ರೀಯ  ದುರಂತ ನಿವಾರಣಾ ಪ್ರಾಧಿಕಾರ ದ  ಆದೇಶದಂತೆ  ಜಿಲ್ಲಾ ದುರಂತ ನಿವಾರಣಾ ಪ್ರಾಧಿಕಾರ ಶುಕ್ರವಾರ  ಅಪರಾಹ್ನ ಕಾಸರಗೋಡು ಕಸಬಾ ಸಮುದ್ರ ತೀರದಲ್ಲಿ ಸುನಾಮಿ ಅಣಕು ಪ್ರದರ್ಶನ ನಡೆಯಿತು. 
ಜಿಲ್ಲಾಡಳಿತದ  ಸಹಕಾರದೊಂದಿಗೆ ನಡೆದ ಅಣಕು ಪ ಪ್ರದರ್ಶನ  ನಾಗರಿಕರಿಗೆ ದೈರ್ಯ ತುಂಬಲು ಕಾರಣವಾಯಿತು.
ಅವಘಡ ಸಂಭವಿಸಿದಾಗ ಸುರಕ್ಷಾ ಕ್ರಮಗಳನ್ನು ಯಾವ ರೀತಿ ಕೈಗೊಳ್ಳಬೇಕು. ಹೇಗೆ ಸಮಯಪ್ರಜ್ಞೆ ತೋರಬೇಕು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. 
ಅಣಕು ಪ್ರದರ್ಶನದಲ್ಲಿ ತೊಡಗಿಸಿಕೊಂಡವರ ಕಾರ್ಯಾಚರಣೆ ಕಂಡು ನೆರೆದವರು ಕೆಲ ಕಾಲ ಮೂಕ ವಿಸ್ಮಿತರಾಗಿದ್ದರು ಅಗ್ನಿಶಾಮಕ ಸಿಬ್ಬಂದಿಯ ಸಾಹಸ, ಸಮಯ ಪ್ರಜ್ಞೆಯನ್ನು ಶ್ಲಾಘಿಸಿದರು.
ಶುಕ್ರವಾರ  ಮಧ್ಯಾಹ್ನ  12.30 ಕ್ಕೆ  ಪಾಕಿಸ್ತಾನ ತೀರದಲ್ಲಿ   ಸಂಭವಿಸಿದ ಭೂಕಂಪದಲ್ಲಿ  ಸುನಾಮಿಗೆ  ಸಾಧ್ಯತೆ  ಇದೆ ಎಂದು ಕಾಸರಗೋಡು ಜಿಲ್ಲಾಧಿಕಾರಿಗೆ  ರಾಷ್ಟ್ರೀಯ   ದುರಂತ  ಪ್ರಾಧಿಕಾರ ದ  ಸಂದೇಶ ಲಭಿಸುವುದರೊಂದಿಗೆ ಅಣಕು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು . ಅಪರಾಹ್ನ 3. 30 ರಿಂದ ಸಂಜೆ 6. 30 ರ  ನಡುವೆ  ಚಂದ್ರಗಿರಿ ತೀರದಲ್ಲಿ ಸುನಾಮಿಗೆ ಸಾಧ್ಯತೆ  ಇದೆ  ಎಂಬ ಸಂದೇಶ ಲಭಿಸಿತ್ತು . 
ಎರಡು ಲಕ್ಷ ಕುಟುಂಬಗಳ ಮೇಲೆ ಪರಿಣಾಮ ಬೀರಲಿದ್ದು , 25 ಮೀಟರ್ ಎತ್ತರದಲ್ಲಿ ಅಲೆ ಗಳು ಅಪ್ಪಳಿಸಲಿದೆ ಎಂಬ ಸಂದೇಶ ನೀಡಲಾಗಿತ್ತು. ಸಂದೇಶ ಲಭಿಸಿದ ಕೂಡಲೇ   ಜಿಲ್ಲಾಧಿಕಾರಿ  ಇ . ದೇವದಾಸನ್  ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ದುರಂತ ನಿವಾರಣಾ ಅಧಿಕಾರಿಗಳ ತುರ್ತು ಸಭೆ ಸೇರಿತು. 
ಚಂದ್ರಗಿರಿ ಕಸಬಾ ತೀರದ  150 ಕುಟುಂಬ ಗಳ   1000 ಮಂದಿಯನ್ನು ಸ್ಥಳಾಂತರಿಸಲು   ಕ್ರಮ ತೆಗೆದುಕೊಳ್ಳಲಾಯಿತು . ಸಮೀಪದ ಶಾಲೆಗಳಿಗೆ  ಸ್ಥಳಾ೦ತರಿಸಲಾಯಿತು  . 
ಶಾಲೆಗಳಿಗೆ ರಜೆ ನೀಡಲಾಯಿತು.  ಕಂಟ್ರೋಲ್  ರೂಂ ತೆರೆಯಲಾಯಿತು. 
ಸಂಚಾರ ವ್ಯವಸ್ಥೆ ಸುಗಮ ಗೊಳಿಸಲಾಯಿತು . ಆರೋಗ್ಯ ಇಲಾಖೆ  ಹಾಗೂ  ಸಂಬಂಧಪಟ್ಟ ಇಲಾಖೆಗಳು ಸಹಕರಿಸಿದವು. 
ಕಂದಾಯ , ಪೊಲೀಸ್ , ಆರೋಗ್ಯ, ಅಗ್ನಿಶಾಮಕ ದಳ  , ಮೀನುಗಾರಿಕೆ , ವಾರ್ತಾ ಇಲಾಖೆ ವ್ಯವಸ್ಥೆಗಳನ್ನು  ಕೈಗೊಂಡವು. 
ಸ್ಥಳಿಯರ  ಸಹಕಾರದೊಂದಿಗೆ  ಅಣಕು ಪ್ರದರ್ಶನ ಯಶಸ್ವಿಯಾಗಿ ನಡೆದಿದ್ದು , ತೀರವಾಸಿಗಳಲ್ಲಿ ಜಾಗೃತಿ ಮೂಡಿಸುವ  ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಇ  . ದೇವದಾಸನ್ , ಜಿಲ್ಲಾ  ಪೊಲೀಸ್  ಮುಖ್ಯಸ್ಥ ಎ . ಶ್ರೀನಿವಾಸ್ , ಉಪ ಜಿಲ್ಲಾಧಿಕಾರಿ ಮ್ರಣ್  ಮಾಯಿ ಶಶಾ೦ಕ್,  ಅಬ್ದುಲ್ ನಾಸರ್  ಹಾಗೂ ಕಂದಾಯ ಅಲ್ಲದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೇತ್ರತ್ವ ನೀಡಿದ್ದರು ಸಾವಿರಾರು ಮಂದಿ ಅಣಕು ಪ್ರದರ್ಶನಕ್ಕೆ ಸಾಕ್ಷಿಯಾದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News